ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಲೋಕದರ್ಶನ ವರದಿ

ಕಾಗವಾಡ 26: ಕಳೇದ ಅನೇಕ ವರ್ಷಗಳಿಂದ ಕಡುಬಡವ ಕುಟುಂಬಗಳಿಗೆ ಚಿನ್ನ, ಬೆಳ್ಳಿಯ ಆಭರಣಗಳು ಎಲ್ಲ ಜಾತಿಯ ಕುಟುಂಬಗಳಿಗೆ ದಾನವಾಗಿ ನೀಡುತ್ತಿರುವ ಆಧುನಿಕರಣ ಮಹಾವೀರ ಪಡನಾಡ್ ಇವರು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಮುಗುತಿ, ವಿದ್ಯಾರ್ಥಿಗಳಿಗೆ ಬಟ್ಟೆ, ಪಾಲಕರಿಗೆ ಮತ್ತು ಸಂಚಾಲಕರಿಗೆ ಲಕ್ಷಾಂತರ ರೂ. ಮೌಲ್ಯದ ದಾನ ನೀಡಿದರು.

ಬುಧವಾರ ರಂದು ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಮೀತಿಯ ಮಹಾವೀರ ಬಾಬುರಾವ ಪಡನಾಡ್ ಪ್ರಾಥಮಿಕ ಶಾಲೆ, ಪಾರಿಸಾ ಸಾತಗೌಡಾ ಗುಂಡವಾಡೆ ಪ್ರೌಢಶಾಲೆಯ 7ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಹಮ್ಮಿಕೊಂಡಿದ್ದರು.

ಸಮಾರಂಭದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರಿಗೆ ವಸ್ತ್ರ ಮತ್ತು ಮುಗುತಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಮೌಲ್ಯದ ವಸ್ತ್ರ, ಸಂಸ್ಥೆಯ ಸಂಚಾಲಕ ಮಂಡಳಿಯ ಎಲ್ಲ ಸದಸ್ಯರಿಗೆ ಗುಣಮಟ್ಟದ ವಸ್ತ್ರ, ಸ್ತ್ರೀ ಸದಸ್ಯರಿಗೆ ಮುಗುತಿ, ಸಾರಿ ದಾನವಾಗಿ ನೀಡಿದರು. ಇಷ್ಟಲ್ಲದೇ ಸಾವಿರಾರು ವಿದ್ಯಾರ್ಥಿಗಳ ಪಾಲಕರಿಗೆ ವಸ್ತ್ರದಾನ ಮಹಾವೀರ ಪಡನಾಡ್ ಮಾಡಿದರು. ಈ ದಾನ ಮಾಡುವ ಹೃದಯವಂತಿಕೆಯನ್ನು ಕಂಡು ಅನೇಕರು ಗೌರವಿಸಿದರು. ಸಮಾಜದಲ್ಲಿ ಅನೇಕರು ಶ್ರೀಮಂತರಿದ್ದಾರೆ. ಆದರೆ, ಸಮಾಜದಲ್ಲಿಯ ಜಾತಿಯತೆ ಅನ್ನದೇ ಪ್ರತಿಯೊಬ್ಬರಿಗೆ ಚಿನ್ನ, ಬೆಳ್ಳಿ ಆಭರಣಗಳು, ವಸ್ತ್ರಗಳು ದಾನ ನೀಡುವ ಏಕೈಕ್ಯ ದಾನಶೂರ ಎಂದು ಹೇಳುತ್ತಿದ್ದರು.

ಸಮಾರಂಭದಲ್ಲಿ ಉಪತಹಸೀಲ್ದಾರ ವಿಜಯ ಚೌಗುಲೆ, ಸಂಸ್ಥೆಯ ಅಧ್ಯಕ್ಷ ಅನೀಲ ಚೌಗುಲೆ, ಉಪಾಧ್ಯಕ್ಷ ಶ್ರೇಯಾಂಸ್ ನಾಂದಣಿ, ಬೊಮ್ಮನ್ನಾ ಚೌಗುಲೆ, ಮಹಾವೀರ ಕಾತ್ರಾಳೆ, ಭಾವುಸಾಹೇಬ ಕಾಗವಾಡೆ, ವಿಜಯ ಅಕಿವಾಟೆ, ಸಂಕೋನಟ್ಟಿ ಪಿಕೆಪಿಎಸ್ ಸಂಸ್ಥೆಯ ಆನಂದ ನಾಯಿಕ, ನರಸಪ್ಪಾ ಖೆಮಲಾಪುರ, ಸಾಗರ ತೇರದಾಳ, ಅಂಬಿಕಾ ಕಾವೇರಿ, ಸೇರಿದಂತೆ ಅನೇಕರು ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸಿದರು.

ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪೂರ್ವಪ್ರಾಥಮಿಕ ವಿಭಾಗಕ್ಕೆ ಎಲ್ಲ ರೀತಿ ಸಹಾಯ ನೀಡುವ ದಾನಿಗಳಾದ ಪುಷ್ಪಾದೇವಿ ಪಾರಿಸಾ ಗುಂಡವಾಡೆ, ಶಾನಕ್ಕಾ ಬಾಬುರಾವ ಚೌಗುಲೆ ಇವರನ್ನು ಸನ್ಮಾನಿಸಿದರು. ಐನಾಪೂರ ಪದ್ಮಾವತಿ ಸಂಸ್ಥೆ, ಕಾಗವಾಡ ವಿದ್ಯಾಸಾಗರ ಸಂಸ್ಥೆಯ ಸಂಚಾಲಕರಿಗೆ ಸಮಾರಂಭದಲ್ಲಿ ಸನ್ಮಾನಿಸಿದರು.