ಮಾಂಜರಿ 04 : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಮತ್ತು ಕೆ ಎಲ್ ಇ ಸಂಸ್ಥೆಯ ಶಾರದಾ ಕೋರೆ ಪ್ರೌಢ ಶಾಲೆ ಅಂಕಲಿಯಲ್ಲಿ ಇಂದು ಚಿಕ್ಕೋಡಿ ತಾಮೂಕಾ ಮಟ್ಟದ ಇಂಗ್ಲಿಷ್ ವಿಷಯದ ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಕಾರ್ಯಾಗಾರವನ್ನು ಏರಿ್ಡಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾ ಬಿ ಎ ಮೇಕನಮರಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಮನ ಮುಟ್ಟುವಂತೆ ಪಾಠೋಪಕರಣಗಳನ್ನು ಬಳಸಿ ಚಟುವಟಿಕೆ ಆಧಾರಿತ ಶಿಕ್ಷಣ ಒದಗಿಸಬೇಕೆಂದು ಕಾರ್ಯಾಗಾರಕ್ಕೆ ಬಂದ ಶಿಕ್ಷಕರಿಗೆ ಹೇಳಿದರು. ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯರಾದ
ಶ್ರೀಮತಿ. ಜೆ. ಎಸ್. ತಮಗೊಂಡ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಬಸಣ್ಣಾ ಆಮ್ಮಿಣಬಾವಿ ಘನ ಉಪಸ್ತಿತಿಯನ್ನು ವಹಿಸಿದ್ದರು. ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ. ಟಿ ಬಿ ಬಡಚಿ, ಶ್ರೀ ಎಸ್ ಬಿ ಕುಂಬಾರ, ಶ್ರೀ ವಾಯ ಎಮ್ ಕಾಮಣ್ಣವರ ಭಾಗಿಯಾಗಿದ್ದರು. ಶ್ರೀ. ಪ್ರಭು ಭಿರಡಿ ಸ್ವಾಗತಿಸಿದರು. ಶ್ರೀಮತಿ ಎ ಎಸ್ ಮಾನೆ ನಿರೂಪಿಸಿದರು. ಶ್ರೀಮತಿ ಡಿ ಎಸ್ ಬಾಕಳೆ ವಂದಿಸಿದರು ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಯ ಇಂಗ್ಲಿಷ್ ವಿಷಯ ಶಿಕ್ಷಕರು ಹಾಜರಿದ್ದರು