ವಿಜಯಪುರ 03: ಕರೋನಾ ಜೊತೆಗಿನ ಹೋರಾಟದ ಮಧ್ಯೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎಲ್ಲಿಯೂ ಗೊಂದಲಿಗಳಿಗೆ ಅವಕಾಶ ನೀಡದೆ ಯಾವುದೇ ಸಮಸ್ಯೆಗಳಿಲ್ಲದೇ ಅಚ್ಚುಕಟ್ಟಾಗಿ ಬಹಳ ಜವಾಬ್ದಾರಿಯಿಂದ ಯಶ್ವಿಸಿಗೆ ಕಾರಣರಾದ ಗೌರವಾನ್ವಿತ ಶಿಕ್ಷಣ ಸಚಿವರಾದ ಸುರೇಶ ಕುಮಾರ ಇವರ ಅತ್ಯಂತ ಮಹತ್ವದ ಜವಾಬ್ದಾರಿಯಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಿ ಶಿಕ್ಷಣ ಸಚಿವರಿಗೂ ಹಾಗೂ ಇಲಾಖೆಗೆ ಗೌರವಕ್ಕೆ ಪಾತ್ರರಾಗಿರುವ ಸಮಸ್ತ ಶಿಕ್ಷಕರು ಹಾಗೂ ಎಲ್ಲಾ ಪರೀಕ್ಷಾ ಸಿಬ್ಬಂದಿಯ ವರ್ಗಕ್ಕೆ, ಸ್ಕೌಟ್ಸ್ & ಗೈಡ್ಸ್ ಕಾರ್ಯಕರ್ತರು ಹಾಗೂ ಸಹಕರಿಸಿದ ಮಾನ್ಯ ವಿಧಾನಸಭೆ & ವಿಧಾನ ಪರಿಷತ್ತಿನ ಶಾಸಕರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಿಕ್ಷಣಾ ಇಲಾಖೆಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರಿವೀಕ್ಷಕರು, ಮುಖ್ಯ ಅಧಿಕ್ಷಕರು, ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಪೋಲಿಸ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರು ಹಾಗೂ ಎಲ್ಲ ಹಂತದ ಇತರೆ ಇಲಾಖೆಗಳು, ಮಾಧ್ಯಮ ಮಿತ್ರರಿಗೂ ಹಾಗೂ ಪ್ರತ್ಯೇಕವಾಗಿ - ಪರೀಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯಪೂರ್ವಕ ಅಭಿನಂದನೆಗಳನ್ನು ವಿಧಾನ ಪರಿಷತ್ತಿನ ಶಾಸಕರಾದ ಅರುಣ ಶಹಾಪೂರ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.