ಹುನಗುಂದ05: ಭಗವಂತ ಕೊಟ್ಟ ಆದಾಯದಲ್ಲಿ ತನ್ನ ಕುಟುಂಬ ನಿರ್ವಹಣೆಗೆ ಅಗತ್ಯವಿರುವಷ್ಟನ್ನು ಉಳಿಸಿಕೊಂಡು ಬಾಕಿ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸುವುದರಲ್ಲಿ ಸಿಗುವಷ್ಟು ಪುಣ್ಯ ಮತ್ತೊಂದು ಕಾರ್ಯದಲ್ಲಿ ಸಿಗಲಾರದು ಎಂದು ಎಸ್ಆರ್ಎನ್ಇ. ಫೌಂಡೇಶನ್ದ ಎಸ್.ಆರ್. ನವಲಿಹಿರೇಮಠ ಹೇಳಿದರು.
ಹುಬ್ಬಳ್ಳಿಯ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಸಹಯೋಗದಲ್ಲಿ ಎಸ್ಆರ್ಎನ್ಇ. ಪೌಂಡೇಶನ್ ವತಿಯಿಂದ ಪಟ್ಟಣದ ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನುಷ್ಯನ ಅಂಗಾಗಗಳಲ್ಲಿ ಪ್ರಮುಖ ಅಂಗ ಕಣ್ಣು. ಕಣ್ಣು ಕಾಣದ ಮನುಷ್ಯನ ಬದುಕು ಕತ್ತಲೆ. ಆಥರ್ಿಕ ತೊಂದರೆಯಿಂದಾಗಿ ಗ್ರಾಮೀಣ ಪ್ರದೇಶದ ಬಹುತೇಕ ಬಡ ಕುಟುಂಬದ ಸದಸ್ಯರು ಈ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಕತ್ತಲೆಯ ಬದುಕು ನಡೆಸುತ್ತಿದ್ದಾರೆ. ಅಂತವರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಇಳಕಲ್ದಲ್ಲಿ ನಡೆಸಿದ ಶಿಬಿರದಲ್ಲಿ 1200ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ 300ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಎಸ್ಆರ್ಎನ್ಇ. ಫೌಂಡೇಶನ್ ಆದ್ಯತೆ ನೀಡುತ್ತಿದ್ದು ಇದಕ್ಕಾಗಿ 86 ಪ್ರತಿಭಾನ್ವಿತ ಬಡ ವಿದ್ಯಾಥಿಗಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ವೆಚ್ಚವನ್ನು ಫೌಂಡೇಶನ್ ಮೂಲಕವೇ ನೀಡಲಾಗುತ್ತಿದೆ. ಇದರಲ್ಲಿ ಕೆಲವರು, ಇಂಜಿನೀಯರಿಂಗ, ಮೆಡಿಕಲ್, ಐಎಎಸ್, ಐಪಿಎಸ್. ವ್ಯಾಸಂಗ ಮಾಡುತ್ತಿದ್ದಾರೆ. ಮಾನವನ ಬದಲಾದ ಜೀವನ ಶೈಲಿಯಿಂದ ಮಧುಮೇಹ ರೋಗ ಬಹುತೇಕ ಜನರನ್ನು ಆವರಿಸಿಕೊಂಡಿದೆ. ಬರುವ ದಿನಗಳಲ್ಲಿ ಮಧುಮೇಹ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲು ತಿಮರ್ಾಣ ತೆಗೆದುಕೊಂಡಿದ್ದು. ಹುನಗುಂದ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿ ಈ ಶಿಬಿರ ನಡೆಸಲಾಗುವುದು ಎಂದು ನವಲಿಹಿರೇಮಠ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್. ಮುಖಂಡ ಹನಮಂತ ಮಾವಿನಮರದ, ಆಥರ್ಿಕವಾಗಿ ಶ್ರೀಮಂತರಾಗಿದ್ದರೂ, ಬಡವರ ಕಲ್ಯಾಣಕ್ಕಾಗಿ ಹಣ ವಿನಿಯೋಗಿಸುವ ಮನೋಸ್ಥಿತಿ ಇಂದಿನ ದಿನಮಾನಗಳಲ್ಲಿ ವಿರಳ. ಆದರೆ, ಎಸ್.ಆರ್. ನವಲಿಹಿರೇಮಠ ತಮ್ಮ ಸಂಪಾದನೆಯ ಹಣದಲ್ಲಿ ಶಿಕ್ಷಣ, ಆರೋಗ್ಯ ಸೇರಿ ಜನ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಅವರ ದೊಡ್ಡತನಕ್ಕೆ ಸಾಕ್ಷಿ. ಇಂತವರು ಜನಪ್ರತಿನಿಧಿಯಾದರೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು. ಬಿ.ಎನ್. ಸೋಲಾಪೂರಮಠ, ಶಿವಪ್ರಸಾದ ಗದ್ದಿ, ಹರ್ಷದ ನಾಯಿಕ ಮಾತನಾಡಿದರು. ನೇತ್ರ ತಜ್ಞರಾದ ಡಾ. ವೆಂಕಟರಾಮ್ ಕಟ್ಟಿ, ಡಾ. ಅನುಜಾ ದೇಸಾಯಿ, ಡಾ. ಕುನಾಲ್ ಬಡಬಡೆ, ಡಾ. ಅಶ್ವಿನಿ ಪಾಟೀಲ, ಡಾ. ಶ್ವೇತಾ, ಡಾ. ವೈ. ಸೇವಂತಿ, ಡಾ,ಪ್ರಮೋದ, ಶಾಂತಯ್ಯ ಮಠ, ವೀಣಾ ಅರಳಿಕಟ್ಟಿ, ಮಹಾಂತೇಶ ತೆಗ್ಗಿನಮಠ, ಮಲ್ಲಿಕಾಜರ್ುನ ಕರಡಿ, ಮಹಾಂತೇಶ ಮಠ, ಇತರರು ಇದ್ದರು. ಕುಮಾರಿ ಸೇವಂತಿ ಬೆಣಗಿ ಪ್ರಾಥರ್ಿಸಿದರು. ವಿಜಯಕುಮಾರ ಗದ್ದನಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗೀತಾ ತಾರಿವಾಳ ನಿರೂಪಿಸಿ. ಬಸವರಾಜ ಹಿರೇಗೌಡರ ವಂದಿಸಿದರು. ಶಿಬಿರದಲ್ಲಿ ಒಟ್ಟು 1250 ಜನರ ನೇತ್ರ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 425 ಜನರಿಗೆ ಶಶ್ತ್ರಚಿಕಿತ್ಸೆ ಮಾಡಲಾಗುತ್ತಿದೆ.