ಕೊರೊನಾ ವೈರಸ್ ಭೀತಿ ಸ್ಕ್ವಾಷ್ ಟೂರ್ನಿ ರದ್ದು

ನವದೆಹಲಿ, ಮಾ.3,ಕೊರೊನಾ ವೈರಸ್ ನಿಂದಾಗಿ ಸ್ಕ್ವಾಷ್ ಟೂರ್ನಿಗಳ ಮೇಲೂ ಕರಿ ನೆರಳು ಬಿದ್ದಿದ್ದು, ಏಷ್ಯನ್ ಟೀಮ್ ಚಾಂಪಿಯನ್ ಶಿಪ್ ಹಾಗೂ ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ ಗಳು ಮುಂದೂಡಲಾಗಿದೆ. ಮಲೇಷ್ಯಾದಲ್ಲಿ ಮಾರ್ಚ್ 25 ಹಾಗೂ 29 ರಂದು ಕೌಲಾಲಂಪುರ್ ದಲ್ಲಿ ನಡೆಯಬೇಕಿದ್ದ ತಂಡ ಚಾಂಪಿಯನ್ ಶಿಪ್ ಹಾಗೂ ಜೂನ್ 29 ರಿಂದ ಜುಲೈ 3 ರವರೆಗೆ ಚೀನಾದಲ್ಲಿ ನಡೆಯಬೇಕಿದ್ದ ಜೂನಿಯರ್ ಚಾಂಪಿಯನ್ ಶಿಪ್ ಗಳು ಮುಂದೂಡಲ್ಪಟ್ಟಿದೆ. ಏಷ್ಯನ್ ಸ್ಕ್ವಾಷ್ ಸಂಸ್ಥೆ (ಎಎಸ್ಎಫ್) ಈ ಬಗ್ಗೆ ಮಾಹಿತಿ ನೀಡಿದ್ದು. ಈ ಟೂರ್ನಿಗಳ ದಿನಾಂಕವನ್ನು ಪ್ರಕಟಿಸಬೇಕಿದೆ. “ಕೋವಿಡ್-19 ವಿಶ್ವದೆಲ್ಲಡೆ ಪಸರಿಸುತ್ತಿದೆ. ಈ ಬಗ್ಗೆ ವಿಶ್ವ ಸಂಸ್ಥೆ ಸಹ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ಆತಿಥೇಯ ದೇಶದೊಂದಿಗೆ ಮಾತನಾಡಿದ್ದು, ಟೂರ್ನಿಯನ್ನು ಮುಂದೂಡಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ” ಎಂದಿದೆ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಗೆ ಈಗಾಗಲೇ 3000 ಸಾವಿರು ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ವಿಶ್ವದಾದ್ಯಂತ 89 ಸಾವಿರ ಜನರು ಈ ಗೋಗಕ್ಕೆ ತುತ್ತಾಗಿದ್ದಾರೆ.