ಪೊಲೀಸ್ ನಾಗರಿಕರ ರಾಷ್ಟ್ರೀಯ ಏಕತಾ ಓಟಕ್ಕೆ ಎಸ್ಪಿ ಚಾಲನೆ

ಹಾವೇರಿ: ಏಕ ಭಾರತ ಶ್ರೇಷ್ಠ ಭಾರತದ ಘೋಷಣೆಯೊಂದಿಗೆ ನಗರದಾದ್ಯಂತ ರಾಷ್ಟೀಯ ಏಕತಾ ಏಟದಲ್ಲಿ ವಿವಿಧ ಠಾಣೆಯ ಪೊಲೀಸರು ಹಾಗೂ  ಲಯನ್ಸ್, ರೋಟರಿ, ಕ್ರೀಡಾ ಶಾಲಾ ವಿದ್ಯಾರ್ಥಿಗಳು ನಾಗರೀಕರು ಭಾಗವಹಿಸಿ ಗಮನ ಸೆಳೆದರು.

   ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ದೇಶದ ಮೊದಲ ಉಪ ಪ್ರಧಾನಿ, ಗೃಹ ಸಚಿವ ಸದರ್ಾರ್ ವಲ್ಲಭಾಯಿ ಪಟೇಲ್ ಜಯಂತಿ ಅಂಗವಾಗಿ ರಾಷ್ಟೀಯ ಏಕತಾ ಓಟ  ಜಿಲ್ಲಾ ಪೋಲೀಸ್ ಇಲಾಖೆಯಿಂದ ಗುರವಾರ ನಗರದಲ್ಲಿ ಆಯೋಜಿಸಲಾಗಿತ್ತು.

   ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಏಕತಾ ಓಟಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

  ಹೊಸಮನಿ ಸಿದ್ದಪ್ಪ ವೃತ್ತ, ಮೈಲಾರ, ಮೈಲಾರ ಮಹಾದೇವ ವೃತ್ತ, ಗಾಂದಿ ವೃತ್ತ, ಜೆ.ಎಚ್ ಪಾಟೇಲ್ ವೃತ್ತ, ಪಿ.ಡಬ್ಲೂ.ಡಿ ಕಾಲೋನಿ, ಪಿ.ಬಿ.ರಸ್ತೆ ಮಾರ್ಗವಾಗಿ ಸಂಚರಿಸಿದ ಏಕತಾ ಓಟದಲ್ಲಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಪೋಲೀಸ್ ಉಪಾಧೀಕ್ಷಕರಾದ ಸಂತೋಷ, ಸಿಪಿಐ ಪ್ರಭಾವತಿ, ಡಿ.ಆರ್ , ಇನ್ಸ್ಪೆಕ್ಟರ್ ಹೆಗಡೆ, ವಾತರ್ಾಧಿಕಾರಿ ಬಿ.ಆರ್. ರಂಗನಾಥ್., ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಸಮಾಜದ ವಿವಿಧ ಮುಖಂಡರು, ವೈದ್ಯರು, ವಿವಿಧ ಘಟಕದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.