ನೊಂದವರಿಗೆ ಎಸ್. ಪಿ ಸಾಹೇಬರ ಸಾಂತ್ವಾನ
ಮುಂಡಗೋಡ 25: ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಅಂಗಡಿ ಮಾಲೀಕನ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿದ ಘಟನೆಯ ವಿಷಯ ಕಾವು ಪಡೆದಿದೆ.
ಹಣ ಕೊಡಲು ನಿರಾಕರಿಸಿದ್ದರಿಂದ, ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದರು ಘಟನೆಯಲ್ಲಿ ಕುಟುಂಬಸ್ಥರಿಗೆ ಕೂಡಾ ಗಾಯಗಳಾಗಿದ್ದವು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಘಟನೆ ನಡೆದ ಭೇಟಿ ನೀಡಿ ನಾವು ಇದ್ದೀವಿ ಭಯಪಡಬೇಡಿ ಅಂತಾ ಅಭಯವನಿತ್ತು ಗಾಯಗೊಂಡ ಮಗುವನ್ನು ಮುದ್ದಾಡಿದರು. ವಿಷಯ ಸಮಗ್ರ ಪರೀಶೀಲನೆ ನಡೆಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನಂತರ ಮಂಗಳಮುಖಿಯರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಂಡರೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ತಿಳಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದರು. ಈ ವೇಳೆಗೆ ಮುಂಡಗೋಡ ಪೋಲಿಸ್ ಠಾಣೆಯ ಅಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.