ಮುಂಬೈ, ಫೆ 17, ವಿವಾಹ ವಿಚ್ಛೇದನ' ಕುರಿತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಸೋನಂ ಕಪೂರ್ ಕಿಡಿಕಾರಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿ ಭಾಗವತ್ ಹೇಳಿಕೆ ಪ್ರತಿಗಾಮಿಯಾಗಿದೆ ಎಂದು ಬೇಸರ , ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆ 16ರಂದು ಅಹ್ಮದಾಬಾದ್ನಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಭಾಗವತ್, "ಶಿಕ್ಷಣ ಹಾಗೂ ಶ್ರೀಮಂತಿಕೆ ಅಹಂಕಾರದಿಂದ ಕುಟುಂಬಗಳು ದೂರವಾಗುತ್ತಿವೆ. `ಶಿಕ್ಷಿತ ಹಾಗೂ ಶ್ರೀಮಂತ' ಕುಟುಂಬಗಳಲ್ಲೇ ಹೆಚ್ಚು ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ ಎಂದೂ ಅಭಿಪ್ರಾಯಪಟ್ಟಿದ್ದರು. ಇದಕ್ಕೆ ತೀಕ್ಷ್ಣವಾಗಿ ಸ್ಪಂದಿಸಿ ಟ್ವೀಟ್ ಮಾಡಿರುವ ಸೋನಂ ಕಪೂರ್ ಯಾವ ವಿವೇಕವುಳ್ಳ ಮನುಷ್ಯರೂ ಈ ರೀತಿ ಮಾತನಾಡುವುದಿಲ್ಲ ಇದೆಲ್ಲ ಪ್ರತಿಗಾಮಿ, ಮೂರ್ಖ ಹೇಳಿಕೆಗಳು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಸೋನಂ ಪೋಸ್ಟ್ ಮಾಡಿದ್ದಾರೆ.