ರಾಣೇಬೆನ್ನೂರು 05: ಪರಿಸರ ನಾಶದಿಂದಾಗಿ ಇಂದು ಪ್ರತಿಯೊಂದು ಪ್ರಾಣಿ ಪಕ್ಷಿ ಸೇರಿದಂತೆ ಮಾನವ ಕುಲ ಅನೇಕ ಸಮಸ್ಯಗಳಿಂದ ಬಳಲುವಂತಾಗಿದೆ. ಪರಿಸರ ಸಂರಕ್ಷಿಸದೇ ಹೋದರೆ, ಮತ್ತಷ್ಟು ಅನಾಹುತಗಳನ್ನು ಎದುರಿಸುವಂತಹ ಕಾಲ ತಂದುಕೊಳ್ಳಬೇಕಾಗುತ್ತದೆ ಎಂದು ಶನೈಶ್ಚರ ಮಂದಿರದ ಷ||ಬ್ರ|| ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರ ಹೊರವಲಯದ ಗಂಗಾಪುರ ರಸ್ತೆಯ ಶನೈಶ್ಚರ ಮಂದಿರ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಬಿ.ಸಿ.ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ, ಪರಿಸರ ಸಂರಕ್ಷಣೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆಗೊಂದು ಮಗು ಪರಿಸರಕ್ಕೊಂದು ಸಸಿ ನೆಡಬೇಕಾಗಿದೆ. ಇದರಿಂದ ಸಂಮೃದ್ದಿಯಾಗಿ ಪರಿಸರ ಬೆಳೆಸಲು ಸಾಧ್ಯವಾಗುತ್ತದೆ ಎಂದ ಶ್ರೀಗಳು ಇಂದಿನಿಂದಲೇ ಎಲ್ಲರೂ ಜಾಗೃತರಾಗಿ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ|| ಎಸ್. ಎಸ್. ಬಣಕಾರ, ಕೃಷಿ ಅಧಿಕಾರಿ ನೇಮನಗೌಡ್ರ, ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾಪ್ರತಿನಿಧಿಗಳು, ಪ್ರಗತಿಭಂಧು, ಸ್ವ-ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.