ಎಸ್‌ಆಯ್‌ಆರ್ : ಮತದಾನದ ಹಕ್ಕು ಕೈ ತಪ್ಪದಂತೆ ಎಚ್ಚರ ವಹಿಸಲು ಸಿದ್ದು ಕೊಣ್ಣೂರ ಕರೆ
SIR: Siddu Konnur calls for caution to ensure voting rights are not lost
ಲೋಕದರ್ಶನ ವರದಿ
ಮಹಾಲಿಂಗಪುರ 01: ಎಸ್. ಆಯ್. ಆರ್ ನಿಂದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಮತದಾನದ ಹಕ್ಕು ಕೈ ತಪ್ಪಿ ಹೋಗುವ ಆತಂಕವಿದೆ ಎಂದು ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಲಿಂಗಪುರ ಪಟ್ಟಣದ ಶಿವ ಶರಣ ಮಾದಾರ ಚೆನ್ನಯ್ಯ ಸಭಾಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಬಿಎಲ್ 2 ಗಳ ತರಬೇತಿ ಕಾರ್ಯಾಗಾರದಲ್ಲಿ ಎಸ್ ಆಯ್ ಆರ್ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ದೇಶದಲ್ಲಿ ಇದೊಂದು ಚುನಾವಣಾ ಆಯೋಗದ ಹೊಸ ಪ್ರಕ್ರಿಯೆ ಆರಂಭಗೊಂಡಿದೆ. ಇದರಲ್ಲಿ ಕೇರಳ ಮಾದರಿಯಲ್ಲಿ ನಾವೆಲ್ಲರೂ ಪಾಲ್ಗೊಂಡು ನಮ್ಮ ಮತದಾನದ ಹಕ್ಕುಗಳನ್ನು ಸುರಕ್ಷಿತಗೊಳಿಸಿಕೊಳ್ಳಬೇಕು.
ಇದರಲ್ಲಿ ಜಾತಿ ಬೇಧ ಎನ್ನದೆ ಎಲ್ಲರ ಮತದಾನ ಹಕ್ಕುಗಳನ್ನು ಕಳೆದುಕ್ಕೊಳ್ಳಲಿದ್ದು, ಬೂತ ಮಟ್ಟದಿಂದ ಮತದಾತರನ್ನು ಬಡಿದೆಬ್ಬಿಸುವ ಕಾರ್ಯ ಬಿಎಲ್ 2 ಗಳದ್ದು.ಬಿಎಲ್ ಗಳ ಮೇಲೆ ಇವರು ಸಿಸಿ ಕ್ಯಾಮೆರಾ ತರಹ ಕೆಲಸ ಮಾಡಬೇಕು. ಈ ಒಂದು ತಿಂಗಳು ದೇಶದ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆ.ಈಗಾಗಲೇ ಇದರ ರುಚಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೋಡಿದ್ದಾಗಿದೆ. ಅಲ್ಲಿಯ ಬೆಳವಣಿಗೆಗಳು ಕರ್ನಾಟಕ ಮತ್ತು ದೇಶದ ಇನ್ನಿತರ ರಾಜ್ಯಗಳಲ್ಲಿಯೂ ನಡೆಯಬಹುದು. ತೇರದಾಳ ಮತ ಕ್ಷೇತ್ರ ಒಂದರಲ್ಲಿಯೇ ಕನಿಷ್ಠ 24 ಸಾವಿರ ಮತಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎಂಬ ಆತಂವನ್ನು ಅವರು ಹೊರ ಹಾಕಿದರು.
ಇನ್ನು ಯಾಮಾರಬೇಡಿ ಯಾಮಾರಿದರೆ ರೇಷನ್ ಕಾರ್ಡ್ ಹಿಡಿದು ಎಲ್ಲ ಸರ್ಕಾರಿ ಸೌಲಭ್ಯಗಳು ನಿಂತು ಹೋಗಲಿವೆ. ಕಾಂಗ್ರೆಸ್ ದೀನ, ದಲಿತರ ಮತ್ತು ಆರ್ಥಿಕವಾಗಿ ಹಿಂದುಳಿದ ಎಲ್ಲ ಜಾತಿ ಜನಾಂಗಗಳ ಜನರ ಹಿತ ಕಾಯ್ದು, ಪ್ರಜಾಪ್ರಭುತ್ವದ ಸಂವಿಧಾನ ಮೇಲೆ ಅಚಲ ಭಕ್ತಿಯನ್ನು ಇಟ್ಟಿರುವ ಪಕ್ಷವಾಗಿದೆ.ಆದ್ದರಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಶ್ರಮಿಸದೆ ಜುಲೈ ತಿಂಗಳಲ್ಲಿ ಸಂಪೂರ್ಣ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರೆ ನೀಡಿದರು.
ರಬಕವಿ ಬನಹಟ್ಟಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಡಾ.ಶಂಕರ ಹುಕ್ಕೇರಿ ಮತ್ತು ನಜೀರ್ ಅತ್ತಾರ ಇವರುಗಳು, ಬಿಎಲ್ 2 ಗಳು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಎಸ್. ಆಯ್. ಆರ್ ಗೆ ಸಹಕಾರ ನೀಡದೆ ಹೋದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದ್ದು ಎಚ್ಚರ ವಹಿಸಲು ತಿಳಿ ಹೇಳಿದರು.
ಒಂದು ತಿಂಗಳ ಕಾಲ ಮಹಾಲಿಂಗಪುರ ಪಟ್ಟಣದ 23 ವಾರ್ಡ್ ಗಳ ಪೈಕಿ ಕಾಂಗ್ರೆಸ್ ಪಕ್ಷದ ಒಟ್ಟು 36 ಜನ ಬಿಎಲ್ 2 ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕಾರ್ಯಾಗಾರದಲ್ಲಿ ಬಲವಂತಗೌಡ ಪಾಟೀಲ್, ಬಸವರಾಜ ರಾಯರ, ಅಬ್ದುಲ್ ರಜಾಕ್ ಭಾಗವಾನ, ವಿಠ್ಠಲ ಸಂಶಿ, ಅರ್ಜುನ್ ದೊಡಮನಿ, ಸುನೀಲಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಅಶೋಕ ಅಂಗಡಿ, ನಜೀರ್ ಝಾರೆ, ವಿಠ್ಠಲಗೌಡ ಕುಳಲಿ, ಸುರೇಶ ಜಾಧವ, ರಾಜು ಭಾವಿಕಟ್ಟಿ, ವಿನೋದ ಸಿಂಪಿ, ಮೌ.ಇಲಿಯಾಸ ಮಕಾನದಾರ, ಹೊಳೆಪ್ಪ ಬಾಡಗಿ, ದಾದಾ ಕರೋಶಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 