ಬೆಂಗಳೂರು, ಫೆ. 19, ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 34 ವರ್ಷ ಗತಿಸಿವೆ. 1986, ಫೆಬ್ರವರಿ 19ರಂದು "ಆನಂದ್ "ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 122 ಚಿತ್ರಗಳಲ್ಲಿ ಅಭಿನಯಿಸಿದ್ದು, ಇಂದು ಅವರ 123ನೇ ಚಿತ್ರ ಟೇಕಾಫ್ ಆಗಿದೆ. ರವಿ ಅರಸ್ ನಿದರ್ೆಶನದ 'ಆರ್ಡಿಎಕ್ಸ್ 'ಚಿತ್ರದ ಮುಹೂರ್ತ ಇಂದು ನೆರವೇರಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇನ್ನು, ಮುಹೂರ್ತ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡ ಪಾಲ್ಗೊಂಡಿದ್ದರು . ಈ ಕುರಿತು ಟ್ವೀಟ್ ಮಾಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, "ಇಂದಿಗೆ ಈ ಚಿತ್ರರಂಗದಲ್ಲಿ ನನ್ನ ಕೆಲಸ ಶುರು ಮಾಡಿ 34ವರ್ಷಗಳಾದವು. ನಿಮ್ಮ ಪ್ರೋತ್ಸಾಹಕ್ಕೆ ಅಭಿಮಾನಕ್ಕೆ ಚಿರಋಣಿ. ಇಂದು ನನ್ನ 123ನೇ ಸಿನಿಮಾದ ಮುಹೂರ್ತ ನೆರವೇರಿತು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ" ಎಂದು ಬರೆದುಕೊಂಡಿದ್ದಾರೆ.