ಬೆಂಗಳೂರು, ಫೆ 18, ರಮೇಶ್ ಅರವಿಂದ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಶಿವರಾತ್ರಿಯಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ ರಮೇಶ್ ಪತ್ತೇದಾರಿಯಾಗಿ ಅಭಿನಯಿಸಿರುವ ಕಾರಣ ಅವರ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ ಇದು ರಮೇಶ್ ಅಭಿನಯದ 101ನೇ ಚಿತ್ರ ಎಂಬುದು ವಿಶೇಷ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ ಎನ್ ಹಾಗೂ ಅನೂಪ್ ಗೌಡ ಅವರು ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ‘ದಿ ಕೇಸ್ ಆಫ಼್ ರಣಗಿರಿ‘ ಎಂಬ ಅಡಿಬರಹವಿದೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣ, ಶ್ರೀಕಾಂತ್, ಆಕಾಶ್ ಶ್ರೀವತ್ಸ ಅವರ ಸಂಕಲನವಿದೆ. ಅಭಿಜಿತ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದು, ಹಾಡುಗಳನ್ನು ಜಯಂತ ಕಾಯ್ಕಿಣಿ ರಚಿಸಿದ್ದಾರೆ. ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಮುಂತಾದವರು ‘ಶಿವಾಜಿ ಸುರತ್ಕಲ್‘ ಚಿತ್ರದ ತಾರಾಬಳಗದಲ್ಲಿದ್ದಾರೆ.