ನವದೆಹಲಿ, ಮಾ 9, ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ, ಕುಸಿತ ಮುಂದುವರಿದಿದೆ.
ಇಂದು ಬೆಳಗಿನ ಆರಂಭಿಕ ವ್ಯವಹಾರದಲ್ಲಿ ಬಿಎಸ್ಇ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 4.5ರಷ್ಟು) ಕುಸಿತ ಕಂಡಿತು. ನಿಫ್ಟಿ ಕೂಡ 400ಕ್ಕೂ ಹೆಚ್ಚು ಪಾಯಿಂಟ್ ಕಳೆದುಕೊಂಡಿದೆ ಹಲವು ಅನುಮಾನಗಳಲ್ಲೇ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ.
ಸನ್ ಫಾರ್ಮದ ಷೇರು ಮೌಲ್ಯ ಮಾತ್ರ ಕೊಂಚ ಏರಿಕೆಯಾಗಿರುವುದನ್ನು ಬಿಟ್ಟರೆ ಉಳಿದಂತೆ ಬೇರೆ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ.
ಜಾಗತಿಕ ತೈಲ ಬೆಲೆಯಲ್ಲಿ ಕುಸಿತವಾಗಿರುವುದು; ಕೊರೋನಾ ವೈರಸ್ ಸೋಂಕಿನ ವೇಗ ಹೆಚ್ಚಾಗುತ್ತಿರುವುದು ; ಯೆಸ್ ಬ್ಯಾಂಕ್ ಸಂಕಷ್ಟದಲ್ಲಿರುವುದು ಹೀಗೆ ವಿವಿಧ ಕಾರಣಗಳು ಷೇರುಪೇಟೆಯನ್ನು ನಲುಗಿಸುತ್ತಿವೆ.ಹೂಡಿಕೆದಾರರ ವಿಶ್ವಾಸ ಕುಂದುತ್ತಿದೆ ತೈಲ ಬೆಲೆ ಕುಸಿತದಿಂದಾಗಿ ಓಎನ್ಜಿಸಿ ಕಂಪನಿಯ ಷೇರು ಶೇ. 11ರಷ್ಟು ಮೌಲ್ಯ ಕುಸಿತ ಕಂಡಿದೆ.ಆರ್ಐಎಲ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಎಲ್ ಅಂಡ್ ಟಿ ಮತ್ತು ಟೆಕ್ ಮಹೀಂದ್ರ ಕಂಪನಿಗಳ ಷೇರುಗಳೂ ಕೂಡ ಸಾಕಷ್ಟು ನಷ್ಟ ಮಾಡಿಕೊಂಡಿವೆ.