ಉಪಚುನಾವಣೆಗೆ ತಾವೇ ಸ್ಪಧರ್ಿಸುವುದು ಖಚಿತ: ಕೋಳಿವಾಡ

ಲೋಕದರ್ಶನವರದಿ

ರಾಣೇಬೆನ್ನೂರು20: ಕಾಂಗ್ರೇಸ್ ಪಕ್ಷವು ನೂರಾರು ವರ್ಷಗಳ ಇತಿಹಾಸ ಹೊಂದಿದೆ.  ಪಕ್ಷ ಅಂದಿನಿಂದ ಇಂದಿನವರೆಗೂ ಅತ್ಯಂತ ಬಲಿಷ್ಠವಾಗಿದೆ.  ರಾಜಕೀಯ ಕೆಲವು ತಾಂತ್ರೀಕ ವಿದ್ಯಮಾನಗಳಿಂದಾಗಿ ಪಕ್ಷದ ಕಾರ್ಯಕರ್ತರು ಕೆಲವು ಭಾಗಗಳಲ್ಲಿ ಗಲಿಬಿಲಿಗೊಂಡಿರಬಹುದು, ಅದಕ್ಕಾಗಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಇದೀಗ ತಳಮಟ್ಟದಿಂದ ಪಕ್ಷವನ್ನು ಮತ್ತು ಅದರ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿರುವುದಾಗಿ ಮಾಜಿ ಶಾಸಕ, ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಹೇಳಿದರು. 

ಅವರು ರವಿವಾರ ಇಲ್ಲಿನ ವಾಗೀಶ ನಗರದ ಗೃಹಸಭಾದಲ್ಲಿ ಆಯೋಜಿಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  25ರಂದು ಶುಕ್ರವಾರ ಜಿಲ್ಲೆಯ ವಾಣಿಜ್ಯ ನಗರ ರಾಣೇಬೆನ್ನೂರು ಮತ್ತು ಹಿರೇಕೇರೂರಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲು ಸಿದ್ಧತೆಗೊಳಿಸಲಾಗಿದೆ.  

ಅಂದು ಸಮಾವೇಶದಲ್ಲಿ ದಿನೇಶ್ ಗುಂಡೂರಾವ್, ಸಿ.ಎಂ.ಇಬ್ರಾಹಿಂ, ಪ್ರಮೋದ್ ಮದ್ವರಾಜ್, ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಮುಖಂಡರು ರಾಜ್ಯದ ಹಿರಿಯ ನಾಯಕರು ಪಾಲ್ಗೊಳ್ಳುವರು.    ಅಂದು ಮಧ್ಯಾಹ್ನ 2 ಗಂಟೆಗೆ ಸ್ಥಳೀಯ ಉದರ್ು ಹೈಸ್ಕೂಲ್ ಸಭಾಂಗಣದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ತಾಲೂಕಿನ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ತಮ್ಮದಾಗಿದೆ ಎಂದರು. 

ಮಾಧ್ಯಮದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಕೋಳಿವಾಡ ಅವರು ಉಪಚುನಾವಣೆಯಲ್ಲಿ ಕಾಂಗ್ರೇಸ್ನಿಂದ ಯಾರು ಸ್ಪದರ್ಿಸುವರು, ಟಿಕೆಟ್ ಯಾರಿಗೆ ದೊರೆಯಬಹುದು ಎನ್ನುವ ಬಹು ಪ್ರಶ್ನೆ ಕಾಡುತ್ತಿರುವುದು ಸಹಜ.  ಇದು ಹೈ ಕಮಾಂಡ್ ನಿಧರ್ಾರಕ್ಕೆ ಬಿಟ್ಟಿದ್ದಾದರೂ ಸಹ ತಾಲೂಕಿನ ಮತದಾರರ ಬಹು ಅಪೇಕ್ಷೆಯಂತೆ ಈ ಬಾರಿಯೂ ತಾವೇ ಸ್ಪದರ್ಿಸುವುದಾಗಿ ಸ್ಪಷ್ಟಪಡಿಸಿದ ಅವರು  ತಮ್ಮ ಪುತ್ರ ಚುನಾವಣೆಗೆ ನಿಲ್ಲುವರೆಂಬ ಗಾಸಿಪ್ಗೆ ತೆರೆ ಎಳೆದರು. 

ಅನರ್ಹ ಶಾಸಕರ ಅಳಿವು -ಉಳಿವಿನ ನಿಧರ್ಾರ ನ್ಯಾಯಾಲಯದ ತೀಮರ್ಾದ ಮೇಲೆ ಅವಲಂಬಿತವಾಗಿದೆ.  22ರಂದು ವಿಚಾರಣೆ ಕಾಯ್ದಿರಿಸಿದೆ.  ಬಹುತೇಕ ಅಂದು ಅಂತಿಮ ನಿಧರ್ಾರ ಪ್ರಕಟಿಸುವ ಸಾಧ್ಯತೆ ಇದೆ.   ಆದರೆ, ಸ್ಪೀಕರ್ ಅಂದು  ಅವರು ನೀಡರುವ ಅನರ್ಹತೆಯ ತೀರ್ಪನ್ನೇ ಎತ್ತಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.  ಎಂದ ಅವರು ಇಂತಹ ಕಾನೂನು ಬದ್ದ ತೀಪರ್ು ಬಂದಾಗ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿರುವುದು ತಾವು ಕಂಡಿದ್ದೇವೆ ಎಂದರು.