ಸೆನ್ಸೆಕ್ಸ್ 185 ಅಂಕ ಇಳಿಕೆ

ಮುಂಬೈ, ಜ 20 , ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 185 ಅಂಕ ಇಳಿಕೆ ಕಂಡು 41,760.18 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 58.25 ಅಂಕ ಇಳಿಕೆ ಕಂಡು 12,294.10 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 42,273.87 ಮತ್ತು 41,708.94. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,430.50 ಮತ್ತು 12,277. ಪವರ್‌ಗ್ರೀಡ್ ಶೇ 3.80 ಏರಿಕೆ ಕಂಡು 204.90 ರೂ, ಐಸಿಐಸಿಐ ಬ್ಯಾಂಕ್ ಶೇ 2.09 ಏರಿಕೆ ಕಂಡು 542 ರೂ, ಏಷ್ಯನ್ ಪೇಂಟ್ಸ್ ಶೇ 0.99 ಏರಿಕೆ ಕಂಡು 1849.40 ರೂ ಮತ್ತು ಭಾರತಿ ಏರ್‌ಟೆಲ್ ಶೇ 0.99 ಏರಿಕೆ ಕಂಡು 504.95 ರೂ ನಷ್ಟಿತ್ತು.ಟಿಸಿಎಸ್ ಶೇ 2.40 ರಷ್ಟು ಇಳಿಕೆಯಾಗಿ 2164.80 ರೂ., ರಿಲಯನ್ಸ್ ಇಂಡಸ್ಟ್ರೀಸ್ ಶೇ 1.79 ರಷ್ಟು ಇಳಿಕೆಯಾಗಿ 1552.40 ರೂ, ಸನ್ ಫಾರ್ಮಾ ಶೇ 1.40 ರಷ್ಟು ಇಳಿಕೆಯಾಗಿ 448.10 ರೂ ಮತ್ತು ಹೆಚ್.ಡಿ.ಎಫ್.ಸಿ  ಬ್ಯಾಂಕ್ ಶೇ 1.30 ರಷ್ಟು ಇಳಿಕೆಯಾಗಿ 1261.20 ರೂ ನಷ್ಟಿದೆ.