ನವದೆಹಲಿ, ಮೇ 6ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿರುವ ಕ್ರಮದ ವಿರುದ್ದ ಗಡಿಭದ್ರತಾ ಪಡೆಯಿಂದ ವಜಾಗೊಂಡಿರುವ ಕಾನ್ಸ್ ಟೇಬಲ್ ತೇಜ್ ಬಹದ್ದೂರ್ ಸಿಂಗ್ ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ತೇಜ್ ಬಹದ್ದೂರ್ ಸಿಂಗ್ ಅವರ ಅರ್ಜಿಯನ್ನು ಅಪೆಕ್ಸ್ ನ್ಯಾಯಾಲಯ ಇನ್ನೂ ಕೈಗೆತ್ತಿಕೊಳ್ಳಬೇಕಿದೆ
ವಜಾಗೊಂಡಿರುವ ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಹಾಜರಾಗುತ್ತಿದ್ದಾರೆ. ಪ್ರಕರಣವನ್ನುತುರ್ತಾಗಿ ಪಟ್ಟಿಮಾಡುವಂತೆ ನ್ಯಾಯಾಲಯದ ರಿಜಿಸ್ಟಾರ್ ಅವರ ಮುಂದೆ ಪ್ರಶಾಂತ್ ಭೂಷಣ್ ಪ್ರಸ್ತಾಪಿಸಲಿದ್ದಾರೆ. ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿನರೇಂದ್ರ ಮೋದಿ ಅವರ ವಿರುದ್ಧ ಸಮಾಜವಾದಿ ಪಕ್ಷದಅಭ್ಯರ್ಥಿಯಾಗಿ ತೇಜ್ ಬಹದ್ದೂರ್ ಯಾದವ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಚುನಾವಣಾಧಿಕಾರಿಯ ಈ ಕ್ರಮವನ್ನು ಯಾದವ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.