ಲೋಕದರ್ಶನ ವರದಿ
ಬೆಳಗಾವಿ : ಮಹಾನಗರ ಪಾಲಿಕೆಗೆ ನಗರ ಸೇವಕರ ಮೀಸಲಾತಿಗೆ ಸಂಬಂಧಿಸಿದಂತೆ ಎಸ್.ಸಿ ಜನಾಂಗದವರಿಗೆ ಶೇ.15ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಶುಕ್ರವಾರ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ದಿನದಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಈ ಕುರಿತು ಮನವಿಯೊಮದನ್ನು ಸಲ್ಲಿಸಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಗೇಜೆಟ್ ಘೋಷಣೆ ಮಾಡಿದ್ದು ಅದರಲ್ಲಿ ದಲಿತ ಸಮುದಾಯಕ್ಕೆ ಅಂದರೆ ಎಸ್.ಸಿ ಜನಾಂಗದವರಿಗೆ ಅನ್ಯಾಯವಾಗಿದೆ. ಮಹಾನಗರ ಪಾಲಿಕೆಯ ಒಟ್ಟು 58 ವಾಡರ್ುಗಳಿದ್ದು ಎಸ್.ಸಿ ಜನಾಂಗದವರಿಗೆ 5 ಸ್ಥಾನಗಳನ್ನು ಮೀಸಲಾಗಿಟ್ಟಿದ್ದಾರೆ.
ಸಂವಿಧಾನಾತ್ಮಕವಾಗಿ ಶೇ.15 ರಷ್ಟು ಮೀಸಲಾತಿ ಇದ್ದು ನಮಗೆ ಇನ್ನೂ 3 ಸ್ಥಾನಗಳು ಮೀಸಲಾತಿ ಕಡಿಮೆಯಾಗಿದ್ದು ನಮ್ಮ ಜನಾಂಗಕ್ಕೆ ಸಿಗಬೇಕಾದ ಶೇಕಡಾವಾರು ಮೀಸಲಾತಿ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಹಿಂದೆ ಸಿಕ್ಕ ಮೀಸಲಾತಿ ವಾಡರ್ುಗಳಲ್ಲಿ ಪನಃ ಕೊಡದೇ ಹೊಸ ವಾಡರ್ುಗಳಿಗೆ ಮೀಸಲಾತಿ ನಿಗದಿ ಪಡಿಸಬೇಕು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಯಲ್ಲಪ್ಪಾ ಎಚ್. ಸಂಕಟಗೋಳಮಹಾದೇವ ಕೊಲಕಾರ, ಕವಿತಾ ಸಂಕಪಗಳ, ಬಚಲರಿ, ಶೀವಶಂಕರ, ಸದಾಶಿವ ಸಂಕಟಗೋಳ ಭಾಗವಹಿಸಿದರು.