'ಚಿ ತು ಸಂಘ'ಕ್ಕೆ ಮಾಧುಸ್ವಾಮಿ ಹಾರೈಕೆ ; ಕನ್ನಡ ಚಿತ್ರರಂಗ ಸಮಸ್ಯೆಯಲ್ಲಿದೆ ಎಂದ ಸಚಿವ

ಬೆಂಗಳೂರು, ಫೆ  19,  ಪ್ರಸ್ತುತ ಕನ್ನಡ ಚಲನಚಿತ್ರರಂಗ ಸಮಸ್ಯೆಯಲ್ಲಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ   ನಿನ್ನೆ 'ಚಿ ತು ಸಂಘ' ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ಭಾಗವಹಿಸಿ, ಚಿತ್ರದ ಯಶಸ್ಸಿಗೆ ಹಾರೈಸಿದ ಸಚಿವರು, ಇಂದಿನ ದಿನಮಾನದಲ್ಲಿ ಕನ್ನಡ ಚಲನ ಚಿತ್ರರಂಗ ಸುರಕ್ಷತವಾಗಿಲ್ಲ  ಸಮಸ್ಯೆಯಲ್ಲಿದೆ   ಚಿತ್ರರಂಗದ ಉಳಿವೆಗೆ ಸಕರ್ಾರ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತಿದೆ ಎಂದರು  ಡಬ್ಬಿಂಗ್ ಚಿತ್ರಗಳ ಸಂಖ್ಯೆ ಕಡಿಮೆಯಾಗಬೇಕು  ಪರಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡಿ ವೀಕ್ಷಿಸುವ ವ್ಯಾಮೋಹ ಬೇಡ  ಈ ಕುರಿತು ಚಿತ್ರರಂಗದ ಹಿರಿಯರಾದ ರಾಜೇಂದ್ರಸಿಂಗ್ ಬಾಬು, ಶ್ರೀನಿವಾಸಮೂತರ್ಿ ಮೊದಲಾದವರೊಡನೆ ಇತ್ತೀಚೆಗಷ್ಟೇ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು ಸಿಂಗಲ್ ಥಿಯೇಟರ್ ಗಳಿಗಾಗಿ ನಿಮರ್ಾಪಕರು ಪರದಾಡುವ ಕಾಲ ಬಂದಿದೆ  ಸಿನಿಮಾಗಳಿಗಿಂತ ಧಾರಾವಾಹಿಗೇ ಜನರು ಒತ್ತು ನೀಡುತ್ತಿದ್ದಾರೆ ಎಂದ ಮಾಧುಸ್ವಾಮಿ, ಕಾಲ ಹೀಗಿದ್ದರೂ, ಗೆಳೆಯ ಶಿವಣ್ಣ 'ಸುಳ್ಳೇ ನಮ್ಮನೆ ದೇವ್ರು' ಎಂಬ ಅಡಿಬರಹ ಹೊಂದಿರುವ 'ಚಿ ತು ಸಂಘ' ಚಿತ್ರ ನಿಮರ್ಿಸಿದ್ದಾರೆ ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು    ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ರೂಪಿಕಾ, ಚಿತ್ರ ನಗೆ ಟಾನಿಕ್ ನೀಡಲಿ ಎಂದು ಹಾರೈಸಿದರು.

   ಚಿ ತು ಸಂಘ (ಚಿಂತೆಯಿಲ್ಲದ ತುಂಡೈಕ್ಳ ಸಂಘ)  ಗ್ರಾಮೀಣ ಸೊಗಡಿನ ಪ್ರೇಮ ಕಥಾಹಂದರವುಳ್ಳ ಚಿತ್ರವಾಗಿದ್ದು, ಕಾಮಿಡಿ ಜಾನರ್ ನಲ್ಲಿದೆ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ಚೇತನ್, ನಟ ಶರಣ್ ಅಭಿನಯದ ಅಧ್ಯಕ್ಷ ಚಿತ್ರದಲ್ಲಿ ಬರುವ ಚಿ ತು ಸಂಘವೇ ಈ ಚಿತ್ರಕ್ಕೆ ಪ್ರೇರಣೆ  ತುಮಕೂರು, ಹಾಸನ ಜಿಲ್ಲೆಯ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಹುಡುಗಿಯನ್ನು ಪಟಾಯಿಸಲು ಯುವಕರ ತಂಡ ಎಂತೆಂತಹ ಸುಳ್ಳು ಹೇಳುತ್ತದೆ ಎಂಬುದೇ ಚಿತ್ರದ ತಿರುಳು ಎಂದು ಮಾಹಿತಿ ನೀಡಿದರು  ಚೇತನ್ ಗೆ ನಾಯಕಿಯಾಗಿ ರೂಪಾ ಕಾಣಿಸಿಕೊಂಡಿದ್ದಾರೆ ಉಳಿದಂತೆ ರತ್ನಚಂದನ, ಬಬಿತಾ, ಗೌತಮ್ ರಾಜು, ಪೃಥ್ವಿ ಮುಂತಾದವರಿದ್ದಾರೆ ಚಿತ್ರದಲ್ಲಿ 4 ಹಾಡುಗಳಿದ್ದು, ನಿಮರ್ಾಪಕ ಶಿವಣ್ಣ ಅವರೊಂದಿಗೆ, ಪಾರ್ವತಿ ಹೊಳೆನರಸೀಪುರ, ಹಾಗೂ ಲಕ್ಷ್ಮೀಕಾಂತಯ್ಯ ಬಂಡವಾಳ ಹೂಡಿದ್ದಾರೆ.