ನವದೆಹಲಿ, ಫೆ.15 ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ರಾಧೆ ಚಿತ್ರದಲ್ಲಿ ಯೋರ್ ಮೋಸ್ಟ್ ವಾಂಟೆಡ್ ಭಾಯ್ ಎಂಬ ಖ್ಯಾತ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸಲ್ಮಾನ್ ಖಾನ್, ಪ್ರಭುದೇವ್ ಅವರ ನಿರ್ದೇಶನದ ರಾಧೆ ಚಿತ್ರದಲ್ಲಿ ಅಭಿನಯಿಸಲಿ ದ್ದಾರೆ. ಈ ಚಿತ್ರ ವಾಂಟೆಡ್ ಚಿತ್ರದ ಮುಂದುವರೆದ ಭಾಗ ಎಂದು ಊಹಿಸಲಾಗುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ವಾಂಟೆಡ್ ಚಿತ್ರದ ಸೂಪರ್ ಹಿಡ್ ಡೈಲಾಗ್ “ಕಮಿಟ್ಮೆಂಟ್” ಎಂಬುದನ್ನು ಹೇಳಲಿದ್ದಾರೆ.
“ಏಕ್ ಬಾರ್ ಜೋ ಮೈನೆ ಕಮಿಟ್ಮೆಂಟ್ ಕರ್ ಲಿಯಾ ತೋ ಮೈ ಖುದ್ ಕಿ ಭಿ ನಹಿ ಸುನತಾ ಹುಂ” ಡೈಲಾಗ್ ರಾಧೆ ಚಿತ್ರದಲ್ಲಿ ಇರಲಿದೆ. ವಾಂಟೆಡ್ ಚಿತ್ರದ ಸಂಭಾಷಣೆ ಹಾಗೂ ಡೈಲಾಗ್ ಹಕ್ಕುಗಳು ಬೋನಿ ಕಪೂರ್ ಬಳಿ ಇವೆ. ಈ ಬಗ್ಗೆ ಅವರೊಂದಿಗೆ ಚರ್ಚೆ ಗಳು ನಡೆದಿವೆ ಎಂದು ತಿಳಿದು ಬಂದಿದೆ. ಒಂದು ವೇಳೆ ಈ ಡೈಲಾಗ್ ಬಳಲಸು ಅವಕಾಶ ಸಿಗದೇ ಇದ್ದರೆ, ಪ್ರಭುದೇವ್ ಹೊಸ ಡೈಲಾಗ್ ಸೃಷ್ಟಿ ಮಾಡಬಲ್ಲರು.