ಬೆಂಗಳೂರು, ಫೆ 18, ವಿಭಿನ್ನ ಶೀರ್ಷಿಕೆಯ ‘ಸಕೂಚಿ’ ಚಿತ್ರದ ಲಿರಿಕಲ್ ವಿಡಿಯೋ ಧ್ವನಿಸುರುಳಿ ಬಿಡುಗಡೆಯಾಗಿದ್ದು, ಮೂರು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿದ್ದು, ಪ್ರೇಕ್ಷಕರನ್ನು ಕುಣಿಸುವಲ್ಲಿ ಯಶಸ್ವಿಯಾಗಿದೆ ಸಂಚಿತ್ ಹೆಗಡೆ, ಅನನ್ಯ ಭಟ್ ಕಂಠಸಿರಿಯ ‘ಅರೆರೇ ಇದೇನಿದು ಸಡಗರವೂ’, ಆಂತೋಣಿ ದಾಸ್ ಹಾಡಿರುವ ಎರಡೇಟು ಬೀಟು ಹಾಗೂ ಕಾರ್ತಿಕ್ ಗಾಯನದ ಶೀರ್ಷಿಕೆ ಗೀತೆಗಳು ಗಮನ ಸೆಳೆಯುತ್ತವೆ ಕಾಶ್ಮೋರದಂತೆಯೇ ಭೀಕರವಾದ ವಾಮಾಚಾರವೇ ಈ ‘ಸಕೂಚಿ’ ಯಾಗಿದ್ದು, ‘ಸಾವಿನ ಸೂಚಿ’ ಎಂಬ ಅಡಿಬರಹ ಹೊಂದಿದೆ.
ಬಿ ಸಿ ಅಶ್ವಿನ್ ನಿರ್ಮಿಸುತ್ತಿರುವ ಚಿತ್ರವನ್ನು ಕೊಟ್ಟಿಗೆಹಾರ, ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿ ಚಿತ್ರೀಕರಿಸಲಾಗಿದೆ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಜೆ ಈ ಚಿತ್ರದ ಸಹ ನಿರ್ಮಾಪಕರು. ಹಾರರ್ ಕಥಾ ಹಂದರವುಳ್ಳ ಈ ಚಿತ್ರವನ್ನು ಅಶೊಕ್ ಎಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.
ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. 40ಕ್ಕೂ ಹೆಚ್ಚು ನಿಜವಾದ ಮಂಗಳಮುಖಿಯರು ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಆನಂದ್ ನುಂದಳೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಕುಂಫು ಚಂದ್ರು ಸಾಹಸ ನಿರ್ದೇಶನ ಹಾಗೂ ಆನಂದ್ ಯಾದವ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪದ್ಮಾವತಿ ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಡಯಾನಮೇರಿ, ಡಾಲಿ, ಸುಕುಮಾರ್, ಸಾರಿಕಾ, ಸುಮನ್ ರಾವ್ ಮುಂತಾದವರಿದ್ದಾರೆ