ನವದೆಹಲಿ, ಜ 17, ‘ಎಸ್‍ಎಐಎಲ್ ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆ ತರುತ್ತದೆ’ ಎಂಬ ವಿಷಯವಾಗಿ ದೇಶದ ಅತಿದೊಡ್ಡ ಉಕ್ಕು ಉತ್ಪಾದಕ ಸಾರ್ವಜನಿಕ ವಲಯದ ಕಂಪೆನಿ, ಭಾರತೀಯ ಉಕ್ಕು ಪ್ರಾಧಿಕಾರ(ಎಸ್ ಎಐಎಲ್) ಕಥೆ ಬರೆಯುವ ಸ್ಪರ್ಧೆಯನ್ನು ಆರಂಭಿಸಿದೆ. ಜನರು ಹೆಚ್ಚು ಪಾಲ್ಗೊಳ್ಳುವಂತಾಗುವ ಉಪಕ್ರಮದ ಭಾಗವಾಗಿ, ವ್ಯಕ್ತಿ, ಅಥವಾ ಪೀಳಿಗೆ ಅಥವಾ ಸಮುದಾಯಗಳ ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆಯಲ್ಲಿ ಎಸ್ ಎಐಎಲ್ ನ ಕೊಡುಗೆ ಕುರಿತಂತೆ ಜನರು ಕಥೆಯನ್ನು ಬರೆಯುವದನ್ನು ಉತ್ತೇಜಿಸಲು ದೇಶಾದ್ಯಂತ ಎಸ್ ಎಐಎಲ್ ಈ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯ ವಿವರಗಳನ್ನು ಎಸ್ ಎಐಎಲ್ ತನ್ನ ವೆಬ್ ಸೈಟ್‍ನಲ್ಲಿ ಪ್ರಕಟಿಸಿದ್ದು, ಸಾಮಾಜಿಕ ಜಾಲಗಳಲ್ಲೂ ಉತ್ತೇಜಿಸುತ್ತಿದೆ. ಸ್ಪರ್ಧೆಯಲ್ಲಿ ಎಸ್ ಎಐಎಲ್ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಸೇರಿದಂತೆ ದೇಶದ ಯಾವುದೇ ಪ್ರಜೆ ಪಾಲ್ಗೊಳ್ಳಬಹುದಾಗಿದೆ. ಕಥೆಯನ್ನು 800 ಪದಗಳಿಗೆ ಸೀಮಿತಗೊಳಿಸಲಾಗಿದೆ. ಕತೆ ಬರೆಯುವವರು ತಮ್ಮದೇ ಸ್ವಂತ ಶೈಲಿಯನ್ನು ಅನುಸರಿಸಬೇಕು. ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ತಲಾ ಐದು ಅತ್ಯಾಕರ್ಷಕ ಬಹುಮಾನಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ಕತೆಗಳನ್ನು ಎಸ್‍ಎಐಎಲ್ ನ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.