ಕಟ್ಮಂಡು, ಡಿ. 3- 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು ಪುರುಷರ 1500 ಮೀ ಓಟದಲ್ಲಿ ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.
ಪುರುಷರ 1500 ಮೀಟರ್ ಓಟದಲ್ಲಿ ಭಾರತದ ಓಟಗಾರರು ಚಿನ್ನ ಮತ್ತು ಬೆಳ್ಳಿ ಗೆದ್ದರೆ, ಮಹಿಳೆಯರ 1500 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದರು.
ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋ 3.54.18 ಸೆಕೆಂಡುಗಳಲ್ಲಿ ಚಿನ್ನ ಗೆದ್ದರೆ, ಭಾರತದ ಇನ್ನೋರ್ವ ಕ್ರೀಡಾಪಟು ಅಜೀತ್ ಕುಮಾರ್ 3.57.18 ಸೆಕೆಂಡುಗಳ ಬೆಳ್ಳಿ ಗೆದ್ದರು. ಕಂಚು ನೇಪಾಳದ ಟ್ಯಾಂಕಾ ಕಾರ್ಕಿಗೆ (3.50.20 ಸೆ) ಪಾಲಾಯಿತು.
ಇದಕ್ಕೂ ಮುನ್ನ ಭಾರತದ ಚಂದಾ (4.34.51 ಸೆ) ಮಹಿಳೆಯರ 1500 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದರೆ, ಸ್ವದೇಶಿ ಚಿತ್ರ ಪಾಲಕೀಜ್ (4.35.46 ಸೆ) ಕಂಚು ಗೆದಿದ್ದರು. ಈ ಪಂದ್ಯಾವಳಿಯಲ್ಲಿ ಚಿನ್ನವನ್ನು ಶ್ರೀಲಂಕಾದ ಉದಾ ಕುಬುರಲೇಜ್ (4.34.34 ಸೆ) ಪಡೆದರು.
ಇಲ್ಲಿಯವರೆಗೆ ಭಾರತೀಯರು 6 ಚಿನ್ನ, 11 ಬೆಳ್ಳಿ ಮತ್ತು 4 ಕಂಚು ಸೇರಿದಂತೆ 21 ಪದಕಗಳನ್ನು ಸಂಗ್ರಹಿಸಿದೆ. ಆತಿಥೇಯ ನೇಪಾಳ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಭಾರತ ಎರಡನೇ ಸ್ಥಾನದಲ್ಲಿದೆ.