ಮುದ್ದೇಬಿಹಾಳ 15: ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಇವರೊಬ್ಬ ಗೋಮುಖ ವ್ಯಾಘ್ರ್ರವಿದ್ದಂತೆ, ನೇರವಾಗಿ ನನ್ನ ಎದುರಿಸಲು ಶಕ್ತಿಯಿಲ್ಲದವರು ಅದು ಸಾಧ್ಯವಾಗದೇ ತಮ್ಮ ಛೇಲಾಗಳಂತೆ ವರ್ತಿಸುತ್ತಿರುವ ಪೋಲಿಸ್ ಅಧಿಕಾರಿಗಳನ್ನು ಮುಂದೆ ಮಾಡಿ ಅಮಾಯಕ ಹೋರಾಟಗಾರರ ಮೇಲೆ ಕೇಸುಗಳನ್ನ ಹಾಕಿಸಿ ದ್ವೇಶದ ರಾಜಕಾರಣ ಪ್ರಾರಂಭಿಸಿದ್ದಾರೆ ಇದು ಹೀಗೆ ಮುಂದುವರೆದರೆ ನಿಮ್ಮ ವಿರುದ್ಧ ಉಗ್ರ ಹೋರಾಟ ನಿರಂತರವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ) ಆರೋಪಿಸಿದರು.
ಪಟ್ಟಣದ ವಿಜಯಪುರ ರಸ್ತೆ ಮಾರ್ಗದಲ್ಲಿರುವ ಗ್ರಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪ್ಪಾಜಿಯವರೇ ನಾನು ನನ್ನ ಸ್ವಂತ ಬಲದ ಮೇಲೆ ಜನರ ಆಶೀರ್ವಾದ ಪ್ರೀತಿಯ ಮೇಲೆ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ ವಿನಃ ನಿಮ್ಮ ಮಾತ್ರವಲ್ಲ, ಜಿಲ್ಲೆಯ ಯಾವ ನಾಯಕರ ಮನೆಗೂ ನಾನಲ್ಲ ನಮ್ಮ ಮನೆಯ ನಾಯಿಯೂ ಕೂಡ ನಿಮ್ಮ ಮನೆಗೆ ಬಂದು ಸಹಾಯ ಕೇಳಿಲ್ಲ. ಸದ್ಯ ನಿಮ್ಮ ಹೇಳಿಕೆ ಶುದ್ಧ ಸುಳ್ಳು. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮಾತನಾಡೋಣ ರಾಜಕೀಯ ಮಾಡೋಣ ನಾನೂ ಕೂಡ ಮೂರು ಬಾರಿ ಶಾಸಕನಾಗಿ ಅಧಿಕಾರ ನೋಡಿದ್ದೇನೆ ಜನರ ಸೇವೆ ಮಾಡಿದ್ದೇನೆ ಎಂಬುದು ತಿಳಿದು ಮಾತನಾಡುವುದು ಸೂಕ್ತ ಎಂದರು.
ನಮ್ಮ ದೇಶದಲ್ಲಿ ಹಸುವನ್ನು ಗೋಮಾತೆ ಎಂದು ದೇವ ರೇಂದು ಅನನ್ಯ ಭಕ್ತಿ ಭಾವದಿಂದ ಪೂಜಿಸುವ ಸಂಪ್ರಾದಯವಿದೆ ಆದರೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕತ್ತರಿಸಿ ಅಮಾನವಿಯವಾಗಿ ಘಟನೆ ಖಂಡಿಸಿ ರಾಜ್ಯಾದಾಧ್ಯಂತ ಆಯಾ ಮತಕ್ಷೇತ್ರಗಳ ಶಾಸಕರ ಮನೆ ಮುಂದೆ ಹಸುವಿನ ಸಗಣೆಯಿಂದ ನೆಲವನ್ನು ಸಾರಿಸಿ ರಂಗೋಲಿ ಬಿಡಿಸುವ ಮೂಲಕ ಲಕ್ಷ್ಮೀ ಮೂರ್ತಿ ಬಿಡಿಸುವ ವಿಭಿನ್ನ ರೀತಿಯ ಹೋರಾಟ ನಮ್ಮ ಸಂಸ್ಕೃತಿ ಬಿಂಬಿಸುವ ಉದ್ದೇಶ ಹೊಂದಿದ್ದರು. ಆದರೇ ಶಾಸಕರು ತಮ್ಮ ಛೇಲಾ ಪಿಎಸೈ ಸಂಜಯ ತಿಪ್ಪಾರೆಡ್ಡಿಯನ್ನು ಮುಂದೆ ಬಿಟ್ಟು ನಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಯೆ ಮಾಡಿಸಿ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತಯೆ ಪ್ರೇರೆಪಿಸಿದ್ದಾರೆ ಇದನ್ನು ಬಲವಾಗಿ ಖಂಡಿಸುತ್ತೇನೆ.
ಜೊತೆಗೆ ನಾನು ರಾಜಕೀಯದಲ್ಲಿರೋವರೆಗೂ ನಿನ್ನ ರಾಜಕೀಯದ ವಿರುದ್ಧ ಸದಾ ನಾನು ಎದ್ದು ನಿಲ್ಲುತ್ತೇನೆ ಸಂಪೂರ್ಣ ನಿನ್ನ ವಿರುದ್ಧವೇ ನನ್ನ ರಾಜಕೀಯ ಹೋರಾಟ ನಿರಂತರಗೊಳಿಸುತ್ತೇನೆ ನಾನೂ ಯಾವತ್ತಿಗೂ ನಿನ್ನ ಮನೆ ಬಾಗಿಲಿನ ಹೊಸ್ತಲು ತಿಳಿಯೋದಿಲ್ಲ ಎಂದು ಇಂದಿನಿಂದಲೇ ಪ್ರತಿಜ್ಞೆ ಮಾಡುತ್ತೇನೆ ಎಂದು ಏಕವಚನದಲ್ಲಿ ಹರಿಹಾಯ್ದರು.
ಖಾಕಿ ಬಟ್ಟೆ ತೊಟ್ಟ ಕಾನೂನು ರಕ್ಷಣೆ ಮಾಡಬೇಕಾದ ಪಿಎಸೈ ಸಂಜಯ ತಿಪ್ಪಾರೆಡ್ಡಿ ಶಾಸಕರ ಕೈಗೊಂಬೆಯಂತೆ ವರ್ತಿಸಿ ಕಾನೂನಿಗೆ ಅಪಚಾರ ಮಾಡುತ್ತಿದ್ದಾರೆ ರಾಜಕಾರಣ ಮಾಡುವ ಹಂಬಲವಿದ್ದರೇ ಖಾಕಿ ಯೂನಿಫಾರ್ಮ ಕಳಚಿಟ್ಟು ಬಂದು ರಾಜಕಾರಣ ಮಾಡಲಿ ಆದರೇ ಅಮಾಯಕ ಹೋರಾಟಗಾರರ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸುವ ಮೂಲಕ ಕಾನೂನನ್ನು ಕಗ್ಗೋಲೆ ಮಾಡುವುದು ಸರಿಯಲ್ಲ. ಅವರು ಮುದ್ದೇಬಿಹಾಳ ಠಾಣೆಗೆ ಬಂದು ಒಂದೂವರೇ ವರ್ಷದಲ್ಲಿ ಈ ರೀತಿಯ ಅಮಾಯಕರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಭಯ ಹುಟ್ಟಿಸುತ್ತಿದ್ದಾರೆ.
ಈ ಬಗ್ಗೆ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೋಳ್ಳುವಂತೆ ಒತ್ತಾಯಿಸಲಾಗುತ್ತದೆ ಜೊತೆಗೆ ಸದ್ಯ ನಿನ್ನೆ ಘಟನೆಯ ಕುರಿತು ಜಿಲ್ಲಾ ಕೇಂದ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು ನಾಲತವಾಡದ ಎಂ ಎಸ್ ಪಾಟೀಲ್, ಮುನ್ನಾ ಧಣಿ ನಾಡಗೌಡ, ಮುಖಂಡ ಹೇಮರಡ್ಡಿ ಮೇಟಿ, ಮಲಕೇಂದ್ರಾಯಗೌಡ ಪಾಟೀಲ್, ಗುರುನಾಥ ದೇಶಮುಖ, ಕೆಂಚಪ್ಪ ಬಿರಾದಾರ, ಮುತ್ತು ಸಾಹುಕಾರ ಅಂಗಡಿ, ಶ್ರೀಶೈಲ ದೊಡಮನಿ, ಸೋಮನಗೌಡ ಬಿರಾದಾರ, ಹರೀಶ್ ನಾಟೇಕಾರ, ಪ್ರೇಮಸಿಂಗ ಚವಾಣ, ಸುವರ್ಣಾ ಬಿರಾದಾರ, ಗೌರಮ್ಮ ಹುನಗುಂದ, ಸಂಗಮ್ಮ ದೇವರಹಳ್ಳಿ, ಪ್ರೀತಿ ಕಂಬಾರ, ರೇಖಾ ಕೊಂಡಗುಳಿ, ಕಾವೇರಿ ಕಂಬಾರ, ಸಂತೋಷ ಬಾದರಬಂಡಿ, ಮುತ್ತಣ್ಣ ಹುಗ್ಗಿ, ರಾಜೂಗೌಡ ಬಳಬಟ್ಟಿ, ಮದನಸ್ವಾಮಿ ಹಿರೇಮಠ, ಅಪ್ಪಣ್ಣ ಧನ್ನೂರು, ಸೋಮನಗೌಡ ಬಿರಾದಾರ, ಸಂಗಮೇಶ ನಾಗೂರ, ಚನ್ನಿಗಾವಿ ಶೆಟ್ಟರ್, ಆಶೋಕ ರಾಠೋಡ ಸೇರಿದಂತೆ ಹಲವರು ಇದ್ದರು.