ಓಲ್ಡ್ ಮಾಂಕ್’ ಚಿತ್ರದಲ್ಲಿ ಎಸ್ ನಾರಾಯಣ್

ಬೆಂಗಳೂರು, ಮಾ 03, ಶ್ರೀನಿವಾಸ ಕಲ್ಯಾಣ ಹಾಗೂ ಬೀರ್ಬಲ್ ಚಿತ್ರದ ನಿರ್ದೇಶಕ ಹಾಗೂ ನಾಯಕ ಎಂ ಜಿ ಶ್ರೀನಿ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ಓಲ್ಡ್ ಮಾಂಕ್‘ ಚಿತ್ರದಲ್ಲಿ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅಭಿನಯಿಸಿದ್ದಾರೆ ಇತ್ತೀಚೆಗೆ ಯಾವ ಚಿತ್ರದಲ್ಲೂ ಎಸ್.ನಾರಾಯಣ್ ಅವರು ಅಭಿನಯಿಸಿರಲಿಲ್ಲ. ನಾಲ್ಕು ವರ್ಷಗಳ ನಂತರ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸಿದ್ದಿ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಪ್ರದೀಪ್ ವರ್ಮ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಭರತ್ ಪರಶುರಾಮ್ ಅವರ ಛಾಯಾಗ್ರಹಣವಿದೆ. ಸೌರವ್ - ವೈಭವ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂತೋಷ್ ನಂದಕುಮಾರ್, ಪ್ರಸನ್ನ.ವಿ.ಎಮ್ ಹಾಗೂ ಶ್ರೀನಿ ಕಥೆ ಬರೆದಿದ್ದಾರೆ. ಸಂಭಾಷಣೆ ಪ್ರಸನ್ನ ವಿ.ಎಂ ಅವರದು. ಶ್ರೀನಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಎಸ್.ನಾರಾಯಣ್, ಅರುಣ ಬಾಲರಾಜ್, ಸುಜಯ್ ಶಾಸ್ತ್ರಿ ಮೊದಲಾದವರ ತಾರಾಗಣವಿದೆ,