ಎಸ್. ಬಿ. ಜಕಾತಿ ಸರಕಾರಿ ಪದವಿ ಕಾಲೇಜಿಗೆ ಉತ್ತಮ ಫಲಿತಾಂಶ
ಯರಗಟ್ಟಿ 10: ಸ್ಥಳೀಯ ಎಸ್. ಬಿ. ಜಕಾತರಿ ಪದವಿ ಪೂರ್ವ ಮಹಾವಿದ್ಯಾಲಯದ
ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ್ದಾರೆ. ಕಲಾವಿಭಾಗದ ವಿದ್ಯಾರ್ಥಿಗಳಾದ ಲಕ್ಷ್ಮೀ ದೇವರಮನಿ (ಶೇ.92.16ಅ), ಸೀಮಾ ಗುರುಗೋಳ (90.66ಅ). ಭೀಮಾರ್ಜುನ ಧರೇಪ್ಪನ್ನವರ (88.33), ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾ ಲಕ್ಷ್ಮೀ ಕಾದರ (80ಅ), ಸ್ಪೂರ್ತಿ ಮಿಕಲಿ (76.16ಅ) ಮತ್ತು ರಕ್ಷಿತಾ ಅಡಗಿಮನಿ (70.83ಅ) ವಾಣಿಜ್ಯ ವಿಭಾದ ವಿದ್ಯಾರ್ಥಿಗಳಾ ರಕ್ಷಿತಾ ಹಿಟ್ಟಣಗಿ (86ಅ), ದೀಪಾ ರಾಯನ್ನವರ (85.33ಅ), ಅಕ್ಷತಾ ಪಾಟೀಲ (84.33ಅ). ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.