ಲೋಕದರ್ಶನ ವರದಿ
ಮಾಂಜರಿ 13: ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಭರತೇಶ ಬನವನೆ ಹೇಳಿದರು.
ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತರ ಕಾಲೇಜು ಮಟ್ಟದ ವಾಲಿಬಾಲ್ ಹಾಗೂ ಥ್ರೋಬಾಲ ಪಂದ್ಯಾವಳಿಗಳು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿಯ ಸದಸ್ಯ ಡಾ. ಆರ್. ಡಿ. ಗಿಝರೆ ವಹಿಸಿದ್ದರು. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಮಲ್ಲಿಕಾಜರ್ುನ ಕೋರೆ ಉದ್ಘಾಟಕರಾಗಿ ಹಾಜರಿದ್ದರು.
ಕ್ರೀಡೆಗಳು ಎಲ್ಲರನ್ನೂ ಒಂದುಗೂಡಿಸುವ ಕೊಂಡಿಗಳಾಗಿವೆ ಇಂತಹ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು ಯುವಕರು ದುಶ್ಚಟಗಳಿಗೆ ಬಲಿಯಾಗದೆ ಯುವ ಸಂಘಟನೆಯಲ್ಲಿ ತೊಡಗಿಕೊಂಡು ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಗ್ರಾಮೀಣ ಭಾಗದಲ್ಲಿರುವ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ರಾಜ್ಯ ಸಭಾ ಸದಸ್ಯ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ್ ಕೋರೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಭರತೇಶ್ ಬನವನೇ ಹೇಳಿದರು.
ಈ ಪಂದ್ಯಾವಳಿ ಉದ್ಘಾಟನೆ ಸಮಾರಂಭಕ್ಕೆ ಡಾ. ಶಿವಾನಂದ ಪಾಟೀಲ್ ಕುಮಾರ್ ಕುಂಬಾರ ಅಣ್ಣಾಸಾಹೇಬ್ ಜಕಾತಿ ಕುಮಾರ್ ಕೋರೆ ತುಕಾರಾಮ ಪಾಟೀಲ್ ಸಚಿನ್ ಕುಟೊಳೆ ಪ್ರಭಾಕರ್ ಶಿಂದೆ ಸಂಜಯ್ ಚೌಧರಿ ಜೆ ಎಸ್ ತಮಗೊಂಡ ಆರ್ ಸಿ ಪಾಟೀಲ್ ಬಿ ಎಸ್ ಅಂಬಿ ವಿನಯ್ ಕುಭಾರ್ ಹಾಗೂ ಕೆಎಲ್ಇ ಸಂಸ್ಥೆಯ ಅಂಕಲಿ ಯಲ್ಲಿರುವ ಎಲ್ಲ ಅಂಗಸಂಸ್ಥೆಗಳ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು ಸದರಿ ಅಂತರ್ ಕಾಲೇಜು ಮಟ್ಟದ ಪಂದ್ಯಾವಳಿಯನ್ನು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾಖರ್ಾನೆ ಚಿಕ್ಕೋಡಿ ಶಿವಶಕ್ತಿ ಶುಗಸರ್್ ಸಕ್ಕರೆ ಕಾಖರ್ಾನೆ ಡಾ ಪ್ರಭಾಕರ್ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಗ್ರಾಮ ಪಂಚಾಯತ್ ಅಂಕಲಿ ಇವರ್ ಪ್ರಾಯೋಜಕದಲ್ಲಿ ಮಾಡಲಾಯಿತು. ಪ್ರಾಚಾರ್ಯ ಸುಧೀರ್ ಕೋಟಿವಾಲೆ ಸ್ವಾಗತಿಸಿ ಪೂಣರ್ಿಮಾ ಕಾಟೆ ನಿರೂಪಿಸಿ ವಂದಿಸಿದರು.