ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ : ಮುರುಗೇಶ ಶಿವಪೂಜಿ
Rural people should take care of their health: Murugesha Shivapuji
ಲೋಕದರ್ಶನ ವರದಿ
ಯರಗಟ್ಟಿ, 30 : ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ ಹಾಗಾಗಿ ನಯಮಿತ ಆರೋಗ್ಯ ತಪಾಸಣೆಯಿಂದ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸ ಬಹುದು ಎಂದು ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ನುಡಿದರು.
ಅವರು ತಾಲೂಕಿನ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘ, ಗ್ರಾಮ ಪಂಚಾಯತ ತಲ್ಲೂರ ಜನಪ್ರಿಯ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನಡಿ ಮಾತನಾಡಿದರು.
ದೇಶದಲ್ಲಿ ಐವತ್ತು ಲಕ್ಷದಷ್ಟು ಜನ ನೇತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ 40ಅ ದಷ್ಟು ಜನ ಮಧುಮೇಹದಿಂದಾಗಿ ನೇತ್ರ ಸಂಬಂಧಿ ಕಾಯಿಲೆಗೆ ಗುರಿಯಾಗಿದ್ದಾರೆ. ನೇತ್ರ ಸಂಬಂಧಿ ಸಮಸ್ಯೆಯಿಂದ ಬಳಲುವವರು 18 ರಿಂದ 25 ವಯಸ್ಸಿನೊಳಗಿನವರ ಸಂಖ್ಯ 56 ಅ. 15 ರಿಂದ 40 ವಯಸ್ಸಿರೊಳಗಿನವರೇ 75 ಪರ್ಸೆಂಟ್. ಇದರಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ನೇತ್ರ ಸಂಬಂಧಿ ಕಾಯಿಲೆಗೆ ತುತ್ತಾದವರು ಸರಿಸುಮಾರು 70ಅ ಜನ ಅದರಲ್ಲಿ 17ರಿಂದ 19 ವರ್ಷದ ಒಳಗಿನವರು 59ಅ ಆಗಿದೆ ಇದೇ ಸ್ಥಿತಿ ಮುಂದುವರೆದರೆ ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ 70ರಿಂದ 75ಅ ಆಗುವ ಆತಂಕವಿದೆ ಇದೆಲ್ಲಾ ಜಾಗತಿಕ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದದ್ದು.
ಅತಿಯಾದ ಮೊಬೈಲ್ ಬಳಕೆಯಿಂದ ನರಗಳ ಸಮಸ್ಯೆಗೆ ಒಳಗಾದವರು ಸದ್ಯಕ್ಕೆ 43ಅ ಇದ್ದರೆ ಮುಂದಿನ ಐದು ವರ್ಷಗಳಲ್ಲಿ 70ಅ ಗೆ ಹೆಚ್ಚುವ ಆತಂಕವಿದೆ ಅದೇ ರೀತಿ ಅತಿಯಾಗಿ ಮೊಬೈಲ್ ನಲ್ಲಿ ಮಾತನಾಡುವದರಿಂದ ಕಿವಿಯ ಸಮಸ್ಯೆಗೆ ಒಳಗದವರು ಇಡೀ ಜಗತ್ತಿನಲ್ಲಿ 150 ಕೋಟಿಯಷ್ಟು ಅದರಲ್ಲಿ ಭಾರತ ದಲ್ಲಿ 20ಅ ಇರುವುದು ದುರ್ದೈವದ ವಿಚಾರ ಇದೇ ರೀತಿ ಮುಂದುವರೆದಲ್ಲಿ ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ 38ಅ ಗೆ ಇರುವ ಆತಂಕವನ್ನು ವ್ಯಕ್ತಪಡಿಸಲಾಗಿದೆ.
ಸಮಸ್ಯೆಗಳಲ್ಲಿ ಅತಿ ಹೆಚ್ಚು ಸಂಖ್ಯೆ 18 ರಿಂದ 24 ವಯಸ್ಸಿನೊಳಗಿನ ಅತಿಯಾಗಿ ಮೊಬೈಲ್ ಬಳಸುವ ವಿದ್ಯಾರ್ಥಿಗಳದ್ದು ಅದು 46 ಅ ಇದೇ ರೀತಿ ಮುಂದುವರೆದಲ್ಲಿ ಡಿಪ್ರೆಶನ್ ಗೆ ಒಳಗಾಗುವವರೆಗೆ ಹೆಚ್ಚುವ ಆತಂಕವಿದೆ. ಹೀಗಾಗಿ ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಮೊಬೈಲ್ ಬಳಕೆಯನ್ನು ಪರಿಣಾಮಕಾರಿಯಾಗಿ ಅತ್ಯಂತ ಕಡಿಮೆ ಬಳಸುವುದೇ ಈ ಎಲ್ಲ ಸಮಸ್ಯೆಗಳ ನವಾರಣೆಗೆ ಇರುವ ಏಕೈಕ ದಾರಿ ಎಂದು ಹೇಳಿದರು.
40ವರ್ಷದ ನಂತರ ಕಣ್ಣಿನ ಸಮಯಗಳು ಕಂಡುಬರುತ್ತವೆ. ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸಮಸ್ಯೆಗಳು ನವಾರಿಸಿಕೊಳ್ಳಬೇಕು. ಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣೆ ಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನಿಯ ಎಂದರು.
ಶಿಬಿರದಲ್ಲಿ 100ಮಂದಿ ತಪಾಸಣೆ ಗೊಳಗಾದರು. 25 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಗಿದೆ ಎಂದು ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಈರಣ್ಣಾ ಹೂಲ್ಲೂರ ತಿಳಿಸಿದರು. ಈ ವೇಳೆ ತೋರಗಲ್ಲ ಮಠದ ದೀಪಕ ಸ್ವಾಮಿ ಸನ್ನದ್ಯ ವಹಿಸಿದ್ದರು, ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ಯಾಮ ಚಿಕಾಕಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಹಿರಿಯ ನೇತ್ರ ಸಹಾಯಕ ಪಾಂಡು ತಳವಾರ, ಮಾಜಿ ಸೈನಕರ ಸಂಘದ ಅಧ್ಯಕ್ಷ ಬಸಪ್ಪ ಅಂಗಡಿ, ಮುಖಂಡ ಶಂಕರಗೌಡ ಪಾಟೀಲ, ಸಂಜೀವಿನ ಮಹಿಳಾ ವಕ್ಕೂಟ ಅಧ್ಯಕ್ಷ ಕಸ್ತೂರಿ ಹೊಸೂರ್, ಗ್ರಾಪಂ ಮಾಜಿ ಸದಸ್ಯ ಬಸವರಾಜ್ ಪೂಜೇರ, ನವೃತ್ತ ಮುಖ್ಯ ಶಿಕ್ಷಕ ಎ. ವಿ. ಇಂಗಳೆ, ಬಸಪ್ಪ ಲಕ್ಕಣ್ಣವರ, ರಾಜಶೇಖರ್ ಅಣ್ಣಿಗೇರಿ, ಪವಿತ್ರಾ ಈಟಿ, ಲಕ್ಷಮಿ ಪಾಟೀಲ, ಹುಸೇನಬಿ ಕುದರಿ, ಬಸನಗೌಡ ಅಣ್ಣಿಗೇರಿ ನರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 