ಗ್ರಾಮೀಣ ಕೂಲಿಕಾರರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ

Rural laborers: Mahatma Gandhi National Rural Employment Guarantee Scheme has helped

ಗ್ರಾಮೀಣ ಕೂಲಿಕಾರರು : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ 

ಕೊಪ್ಪಳ  24: ಕುಕನೂರು ಕೂಲಿಕಾರರಿಗೆ ನೆರವಾದ ನರೇಗಾ, 4.10 ಗುರಿ 4.60 ಸಾಧನೆ ಲಕ್ಷ ಮಾನವ ದಿನಕುದರಿಮೋತಿ ಗ್ರಾಮ ಪಂಚಾಯತಿಯಲ್ಲಿ ಒಂದರಲ್ಲಿ 56,686 ಮಾನವ ದಿನ ಸೃಜನೆ ಮಹಾತ್ಮಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ವಾಸಿಸುವ ಅಕುಶಲ ಕೂಲಿಕಾರಗೆ ಕುಟುಂಬಗಳಿಗೆ 100 ದಿನಗಳ ಕೂಲಿ ಕೆಲಸ ಒದಗಿಸುವ ಮಹಾತ್ವಕಾಂಕ್ಷಿ ಯೋಜನೆ, ಅದರಂತೆ ಕುಕನೂರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳು ಕೂಲಿಕಾರರಿಗೆ 2024-25 ನೇ ಸಾಲಿನಲ್ಲಿ ಹೆಚ್ಚು ಹೆಚ್ಚು ಕೆಲಸ ನೀಡಿದ್ದರಿಂದ ವಾರ್ಷಿಕ ಗುರಿಗಿಂತ ಅಧಿಕ ಸಾಧನೆ ಮಾಡಿ ಕೂಲಿಕಾರರ ನೆಮ್ಮದಿಯ ಬದುಕಿಗೆ ಸಾಕ್ಷಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಭೌಗೋಳಿಕವಾಗಿ ಬಯಲು ಸೀಮೆ ಪ್ರದೇಶವಿದ್ದು ವಾರ್ಷಿಕವಾಗಿ ಅತೀ ಕಡಿಮೆ ಅಂದರೆ 400ಟಟ ರಿಂದ 500ಟಟ ಮಾತ್ರ ಅನಿಶ್ಚಿತತೆಯಿಂದ ಕೂಡಿಕ ಮಳೆ ಆಗುತ್ತದೆ. ಇದರಿಂದಾಗಿ ಬಹುಪಾಲು ಕೃಷಿ ಕೂಲಿಕಾರರು ಮಾನ್ ಸೂನ್ ಹೊರತು ಪಡಿಸಿದ ದಿನಗಳಲ್ಲಿ ತುತ್ತಿನ ಚೀಲ ತುಂಬಿಸಲು ಕೂಲಿಕಾರರು ಕೂಲಿ ಕೆಲಸಕ್ಕಾಗಿ ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪ್ರಮೇಯ ಬರುತ್ತಿತ್ತು. ಆದರೆ ಮಹಾತ್ಮಗಾಂಧಿ ನರೇಗಾ ಯೋಜನೆ ಮೂಲಕ ತಾಲೂಕಿನಾಧ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಿರಂತೆ ಕೆಲಸ ನೀಡವ ಮೂಲಕ ಅಭದ್ರತೆಯ ಜೀವನದಿಂದ ನೆಮ್ಮದಿಯ ಜೀವನಕ್ಕೆ ಸಾಕ್ಷಿಯಾಗಿದೆ. ಕುಕನೂರ ತಾಲೂಕಿನಲ್ಲಿ ಒಟ್ಟು 15 ಗ್ರಾಮ ಪಂಚಾಯಗಳು ಸಕಾಲದಲ್ಲಿ ಕೆಲಸ ನೀಡಿದ್ದರಿಂದ 4,60,468 ಮಾನವ ದಿನ ಸೃಜನೆ ಮಾಡಿದೆ.  

ವಾರ್ಷಿಕವಾಗಿ ಗುರಿ 4.10 ಲಕ್ಷ ಮಾನವ ದಿನ ಆದರೆ ಸಾಧನೆ 4.60 ಲಕ್ಷ ಮಾನವ ದಿನಗಳಿಗಿಂತಲೂ ಹೆಚ್ಚಿನ ಮಾನವ ದಿನ ಸೃಜನೆ ಮಾಡುವ ಮೂಲಕ ಗ್ರಾಮ ಪಂಚಾಯತಿಗಳಲ್ಲಿ 4475 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅಲ್ಲದೇ ಮಹಿಳಾ ಕೂಲಿಕಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶೇ 53.53ಅ ಭಾಗವಹಿಸುವಿಕೆ ಮಾಡಲಾಗಿದೆ. ಮಣ್ಣು, ನೀರು ಮತ್ತು ಗಿಡ ಸಂರಕ್ಷಣೆಗೆ ಸಂಭಂದಿಸಿದಂತೆ ನೈಸರ್ಗಿಕ ಸಂಪನ್ಮೂಲ ಬಲಪಡಿಸುವ ಕಾಮಗಾರಿಗಳನ್ನು ಶೇ 65ಅ ರಷ್ಟು ಅನುಷ್ಟಾನ. ಮಾಡಿ  ಒಟ್ಟು 15.34 ಕೋಟಿ ಅನುದಾನ ಬಳಕೆ ಮಾಡುವ ಮೂಲಕ ಗ್ರಾಮೀಣ ಕೂಲಿಕಾರರು ಯಾರು ಹಂಗು ಇಲ್ಲದೇ ಸ್ವಾವಲಂಭಿ ಬದುಕು ಕಟ್ಟಿಕೊಂಡು ಒಂದೆಡೆ ನೆಲೆಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ.  

“ಕುದರಿಮೋತಿ” ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಅತೀ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡಿ 56,686  ಮಾನವ ದಿನ ಸೃಜನೆ ಮಾಡಿದೆ, “ತಳಕಲ್‌” ಗ್ರಾಮ ಪಂಚಾಯತಿ ಮಹಿಳಾ ಕೂಲಿಕಾರರಿಗೆ ಅತೀ ಹೆಚ್ಚು ಕೆಲಸ ನೀಡಿ ಶೇ 68ಅ ಮಹಿಳಾ ಭಾಗವಹಿಸುವಿಕೆ ಮಾಡಿ ಪ್ರಶಂಸೆಗೆ ಪಾತ್ರವಾಗಿವೆ.“ಕೋಟ್‌-1 ನರೇಗಾ ಫಲಾನುಭವಿ” ಉದ್ಯೋಗ ಖಾತ್ರಿ ನಮ್ಮ ಜೀವನದ ಭದ್ರತೆಯ ಖಾತ್ರಿ, ನಾವು ಪ್ರತಿ ವರ್ಷ ಕೂಲಿ ಕೆಲಸಕ್ಕ ಬರುತ್ತೀವಿ, ಕೆಲಸ ಮಾಡ್ತಿವಿ, ಬಂದ ದುಡ್ಡನ್ನ ನನ್ನ ಮಕ್ಕಳಿಗೆ ವಿದ್ಯಾಬ್ಯಾಸಕ್ಕಾಗಿ, ನಮ್ಮ ಮನಿ ಖರ್ಚು, ಬಿತ್ತಾಕಾ, ದಿನಸಿ ಸಾಮಾನು ತೊಗೋಳಾಕ ಬಳಸುತ್ತೀವ್ರಿ. ಮಳೆ ಇಲ್ಲರೀ ಕೆಲಸ ಕೊಟ್ಟಿದ್ದಕ್ಕಾ ಬಹಳಾ ಉಪಯೋಗ ಆಗೈತ್ರೀ ನಮಗ. ಕೂಲಿಕಾರರು-ಗಂಗಮ್ಮ ನಿಂಗಪ್ಪ ದೊಡ್ಮನಿ.“ಕೋಟ್‌-ಕಾರ್ಯನಿರ್ವಾಹಕ ಅಧಿಕಾರಿ-2” ಕುಕನೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂಪ್ಯೂಟರ್ ಅಪರೇಟರ್ ಪ್ರತಿದಿನ ತಾಳ್ಮೆಯಿಂದ ಕೆಲಸ ನೀಡಿದ್ದಾರೆ.ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಸಹಾಯಕ ನಿರ್ದೇಶಕರು ನಿರತಂರ ಮೇಲ್ವಿಚಾರಣೆ ಮಾಡಿರುವುದು, ನರೇಗಾ ಸಿಬ್ಬಂದಿಗಳಾದ ತಾಂತ್ರಿಕ, ಎಮ್‌.ಐ.ಎಸ್, ಐ.ಇ.ಸಿ ಸಂಯೋಜಕರು, ನರೇಗಾ ಸಿಬ್ಬಂದಿಗಳ ಸಹಕಾರದೊಂದಿಗೆ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಕೂಲಿಕಾರರು ತಮ್ಮ ಗ್ರಾಮದಲ್ಲಿಯೇ ಕೆಲಸ ಸಿಗುವಂತಾಗಿದೆ. ಕಾರ್ಯನಿರ್ವಾಹಕ ಅಧಿಕಾರಿ-ಸಂತೋಷ ಬಿರಾದರ್ ಪಾಟೀಲ್‌.“ಕೋಟ್‌- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-3” ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೂಲಿಕಾರರು ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಜಾರಿಯಾದ ಮಹಾತ್ವಾಕಾಂಕ್ಷಿ ಯೋಜನೆ, ಈ ಯೋಜನೆಯಡಿ ಸ್ಥಳಿಯವಾಗಿ ಕೆಲಸ ನೀಡಲಾಗುತ್ತದೆ 5 ಕಿ.ಮಿ ದೂರವಿದ್ದರೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ, ಅಲ್ಲದೇ ಕೆಲಸದ ಸ್ಥಳದಲ್ಲಿಯೇ ಕೂಲಿಕಾರರ ಆರೋಗ್ಯ ತಪಾಸಣೆ ಮಾಡುವುದರಿಂದ ದಕ್ಷತೆಯಿಂದ ಆರೋಗ್ಯವಂತರಾಗಿ ಕೆಲಸ ಮಾಡಲು ಸಹಾಯವಾಗುತ್ತಿದೆ. ಮತ್ತು ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆಗಳನ್ನು ಪ್ರಾರಂಭ ಮಾಡಿದ್ದು ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಾಗಿದೆ.