ಕಡಬಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಗ್ರಾಮೀಣ ಶಿಕ್ಷಕರ ಸೆಡ್ಡು

ಲೋಕದರ್ಶನ ವರದಿ

ಕಡಬಿ 11: ಮಂಗಳವಾರ ದಿ.9 ರಂದು ವಿವಿಧ ಬೇಡಿಕೆಗಳನ್ನು ಈಡೇರುಸುವಂತ್ತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸದೆ ಗ್ರಾಮೀಣ ಶಿಕ್ಷಕರ ಸಂಘ ಸಡ್ಡು ಹೊಡೆದಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಪ್ರಾಥಮೀಕ ಶಾಲೆಗಳು ಯಥಪ್ರಕಾರ ನಡೆದಿವೆ. ಇದು ಶಿಕ್ಷಕ ಸಮುದಾಯದಲ್ಲಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾದಂತ್ತಾಗಿದೆ.

ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವಿಧರ ಶಿಕ್ಷಕರೆಂದು ಪರಿಗಣಿಸಿ ವೇತನ ಶ್ರೇಣಿ ನಿಗಧಿಪಡೆಸಬೇಕು ಸೇರಿದಂತ್ತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತ್ತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಾದ್ಯಂತ ಶಾಲೆ ಬಂದ್ ಗೊಳಿಸಲು ಕರೆ ನೀಡಿತ್ತು. ಅದರಂತ್ತೆ ಯರಝವರ್ಿ ಕ್ಲಷ್ಟರ್ ವ್ಯಾಪ್ತಿಗೆ ಬರುವ ಕಡಬಿ, ಯರಝವರ್ಿ, ಗೊರಗುದ್ದಿ, ಇನ್ನೂ ಹಲವಾರು ಗ್ರಾಮಗಳ ಶಾಲೆಗಳು ಬಂದ್ಗೆ ಬೆಂಬಲ ನೀಡದೇ ವಿದ್ಯಾಥರ್ಿಗಳ ಶಿಕ್ಷಣಕ್ಕೆ ಕುಂಟಿತವಾಗಬಾರದೆಂದು ಗ್ರಾಮೀಣ ಭಾಗದ ಶಿಕ್ಷಕರು ಯಥಾಸ್ಥೀತಿಯಲ್ಲಿ ಶಾಲೆ ತೆರೆಯಲಾಗಿತ್ತು. 

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ ಪ್ರತಿಭಟನೆಯಲ್ಲಿ ಗಾಮೀಣ ಬಾಗದ ಶಿಕ್ಷಕರು ಪಾಲ್ಘೋಳ್ಳಲಿಲ್ಲ. ಜೋತೆಗೆ ಯಥಾ ಶಾಲೆಗಳನ್ನು ನಡೆಸುವ ಮೂಲಕ ಬಹಿರಂಗವಾಗಿ ಗ್ರಾಮೀಣ ಶಾಲೆಗಳು ಸಡ್ಡು ಹೊಡೆದಂತ್ತಾಗಿದೆ. 

ಬೆಳಗಾವಿ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದಶರ್ಿ ಸಂಗಮೇಶ ಖನ್ನಿನಾಯ್ಕರ ಮಾತನಾಡಿ, ನಾವು ಇವತ್ತು ಶಾಲೆಯನ್ನು ಬಂದ್ ಮಾಡಿಲ್ಲ ಎಲ್ಲೆಡೆ ಗ್ರಾಮೀಣ ಬಾಗದ ಶಾಲೆಗಳು ಯಥಾ ಪ್ರಕಾರ ನಡೆದಿವೆ. ಕನರ್ಾಟಕ ಪ್ರಾಥಮಿಕ ಶಿಕ್ಷಕರ ಸಂಘ ಕರೆದ ಪ್ರತಿಭಟನೆಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟ ಪಡಿಸಿದ್ದೇವೆ.