ಲೋಕದರ್ಶನ ವರದಿ
ಮೋಳೆ 17: ಗ್ರಾಮೀಣ ಭಾಗದ ಆರ್ಥಿಕತೆಯಲ್ಲಿ ಹಾಲು ಉತ್ಪಾದನೆ ಮತ್ತು ಪಶುಸಂಗೋಪಣೆಯಂತಹ ಕೃಷಿಯೇತರ ಚಟುವಟಿಕೆಗಳಿಗೆ ಬಹಳಷ್ಟು ಅವಕಾಶಗಳಿವೆ. ಹಾಲು ಉತ್ಪಾದನೆಯಲ್ಲಿ ಹೆಚ್ಚು ಹಾಲು ಕರೆಯುವ ಜಾನುವಾರಗಳ ಸಾಗಣಿಕೆಯಿಂದ ಕೃಷಿಯೊಂದಿಗೆ ಉತ್ತಮ ಆದಾಯ ಗಳಿಸಬಹುದಾಗಿದೆ. ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಯನ್ನು ಸಹ ಮಾಡಿ ಆರ್ಥಿಕ ಸದೃಢರಾಗಬಹುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷ ಆಶಾ ಐಹೊಳೆ ಹೇಳಿದರು.
ಇಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕೆಆಯ್ಆರ್ಡಿಎಲ್ ಇಲಾಖೆಯ ವತಿಯಿಂದ 38 ಲಕ್ಷ ರೂ ವೆಚ್ಚದ ಪುಶುಚಿಕ್ಸಾಲಯದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಈ ಪುಶು ಚಿಕ್ಸಾಲಯದ ನೂತನ ಕಟ್ಟಡಕ್ಕೆ ರಾಜ್ಯ ಸರ್ಕಾರದ ಆರ್.ಐ.ಡಿ.ಎಫ್. ಯೋಜನೆಯಲ್ಲಿ ರೂ. 38 ಲಕ್ಷಗಳು ಮಂಜೂರಾಗಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಕಾಮಾಗಾರಿ ಉತ್ತಮ ಹಾಗೂ ವೇಳೆಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಲ್ಯಾಂಡ ಆರ್ಮಿಯವರಿಗೆ ಕಾಮಗಾರಿಯನ್ನು ನೀಡಲಾಗಿದೆ ಎಂದರು.
ಕೆಆಯ್ಆರ್ಡಿಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಜಿ.ಷಣ್ಮುಕಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಇಕ್ಬಾಲ ಕನವಾಡೆ, ಉಪಾಧ್ಯಕ್ಷೆ ಸುನಂದಾ ನಾಂದನಿ,
ಕಾಗವಾಡೆ, ತಾ.ಪಂ. ಸದಸ್ಯ ಶಶಿಕಾಂತ ಕಾಂಬಳೆ, ಮುಖಂಡರಾದ ರಾಮಗೌಡಾ ಪಾಟೀಲ, ದೀಪಕ ಪಾಟೀಲ, ವಿಜಯ ಅಕಿವಾಟೆ, ಶಿವಾನಂದ ಪಾಟೀಲ, ಭೀಮು ಅಕಿವಾಟೆ, ರಾಜೇಂದ್ರ ಚೌಗುಲೆ,
ಪ್ರಕಾಶ ಹೇಮಗೀರೆ, ಯಶವಂತ ಪಶು ಇಲಾಖೆ ಅಧಿಕಾರಿಗಳಾದ ಡಾ. ಭುಜಬಲಿ ಐಗಳಿ, ಡಾ. ಸುರೇಶ ಕದ್ದು, ಡಾ. ರಮೇಶ ಮಿರಜೆ, ಡಾ. ವ್ಹಾಯ್. ಡಿ. ಅನಪಾಲ ಮತ್ತು ಅನೇಕ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪದ್ಮಣ್ಣ ಕುಂಬಾರ ಉಪಸ್ಥಿತರಿದ್ದರು.