ಲೋಕದರ್ಶನವರದಿ
ಚಿಮ್ಮಡ17: ಜಾತ್ರೆ ಉತ್ಸವಗಳಿಂದ ಗ್ರಾಮೀಣ ಸಂಸ್ಕ್ರತಿ, ಪರಂಪರೆ ಜೀವಂತವಾಗಿದ್ದು ತಮ್ಮದೇಯಾದ ಮಹತ್ವ ಹೊಂದಿರುವ ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಬನಹಟ್ಟಿ ಪೊಲೀಸ್ ವೃತ್ತ ನಿರೀಕ್ಷಕ (ಸಿಪಿಐ) ಜೆ. ಕರುಣೇಶಗೌಡ ಹೇಳಿದರು.
ಗ್ರಾಮದಲ್ಲಿ ಬನಶಂಕರಿದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ದಿ. ಮಹಾದೇವಪ್ಪ ಹಟ್ಟಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವರಾಜ್ ಮೆಲೋಡೀಸ್ ರವರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೌಹಾರ್ದತೆಯ ನೀತಿಯಿದೆ. ಸತ್ವವಿದೆ. ಬದುಕಿಗೆ ದಾರಿದೀಪವಾಗಬಲ್ಲ ಅಂಶಗಳು ಜಾನಪದ ಹಾಡುಗಳು, ಕಥೆಗಳು ಹೊಂದಿರುವುದರಿಂದ ಅವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದು ಅಗತ್ಯವಿದೆ, ಚಿಮ್ಮಡ ಗ್ರಾಮವು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಗೆ ಮಾದರಿಯಾಗಿದ್ದು, ಇಲ್ಲಿನ ಎಲ್ಲ ಸಮಾಜ ಬಾಂಧವರ ಹೊಂದಾನಿಕೆ ಮನೋಭಾವ ಅನುಕರನೀಯವಾಗಿದೆಯಂದರು.
ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಮಾತನಾವಿಂದಿನ ಆಧುನಿಕ ಯುಗದಲ್ಲಿ ಕಲೆ, ಹಾಡುಗಾರಿಕೆ, ನೃತ್ಯ ವಿಭಾಗದಲ್ಲಿ ಹಲವಾರು ಪ್ರತಿಭೆಗಳು ಗ್ರಾಮೀಣ ವೇದಿಕೆಗಳ ಮೂಲಕವೇ ಬೆಳಕಿಗೆ ಬರುತಿದ್ದು ಪ್ರತಿಭಾ ಪುರಸ್ಕಾರಕೆ ಇಂಥಹ ವೇದಿಕೆಗಳು ಸಹಕಾರಿಯಾಗಿವೆಯಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಜನಾರ್ಧನ ಮಹಾರಾಜರು ವಹಿಸಿದ್ದರು, ಅಧ್ಯಕ್ಷತೆಯನ್ನು ಮನೋಜ ಹಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಂ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುಕರ್ಿ ವಹಿಸಿದ್ದರು, ಗ್ರಾಂ.ಪಂ. ಉಪಾದ್ಯಕ್ಷ ಗಿರಮಲ್ಲಪ್ಪಾ ಹಟ್ಟಿ, ಗ್ರಾಂ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಎಸ್, ರೂಗಿ, ಪ್ರಭು ನೇಸೂರ, ಎಪಿಎಂಸಿ ನಿದರ್ೇಶಕ ಪ್ರಭು ಮುಧೋಳ, ಬಸವರಾಜ ಕುಂಚನೂರ, ಭೀಮಶಿ ಅರುಟಗಿ, ಪ್ರಭು ಬರಗಲ್ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು. ನಂತರ ಶಿವರಾಜ್ ಮೆಲೋಡಿಸ್ ಬೆಳಗಾವಿಯವರಿಂದ ನಡೆದ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ, ಜನಪದ ಕಲಾವಿದರು, ಕನ್ನಡದ ಸ್ಟಾರ್ ನಟರ ತದ್ರೂಪು (ಜೂನಿಯರ್) ಕಲಾವಿದರು ಬಾಗವಹಿಸಿ ಪ್ರೇಕ್ಷಕರಿಗೆ ನೂತನ ಮಾದರೀಯ ಮನರಂಜನೆಯ ರಸದೌತನ ನೀಡಿದರು.
ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಚಲನಚಿತ್ರ ಗೀತೆಯೊಂದನ್ನು ಹಾಡುವ ಮೂಲಕ ಸಾರ್ವಜನಿಕರನ್ನು ಚಕಿತಗೊಳಿಸಿದರು, ಅಲ್ಲದೇ ಹಲವಾರು ಸಾಧಕರನ್ನು ಸಂಘಟಿಕರು ಸತ್ಕರಿಸಿದರು.