ಮುಂಬೈ, ಆ 5 ಬ್ಯಾಂಕರ್ಗಳು ಮತ್ತು ಆಮದುದಾರರಿಂದ ಅಮೆರಿಕ ಡಾಲರ್ಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಸೋಮವಾರ ಅಮೆರಿಕದ ಡಾಲರ್ ಎದುರು 99 ಪೈಸೆ ಇಳಿಕೆ ಕಂಡು, 70.58 ಕ್ಕೆ ತಲುಪಿದೆ ಎಂದು ಮಾರುಕಟ್ಟೆಯ ಡೀಲರ್ ಗಳು ತಿಳಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಆರಂಭ ಮತ್ತು ಅಡೆತಡೆಯಿಲ್ಲದ ವಿದೇಶಿ ನಿಧಿಯ ಹೊರಹರಿವು ಭಾರತೀಯ ರೂಪಾಯಿಯ ಮೇಲೆ ಒತ್ತಡ ಹೇರಿದ್ದರ ಪರಿಣಾಮ ಅದರ ಮೌಲ್ಯ ಕುಸಿತ ಕಂಡಿದೆ. ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 70.20ಕ್ಕೆ ದುರ್ಬಲವಾಗಿ ತೆರೆದು 70.58ಕ್ಕೆ ಇಳಿದಿದೆ. ಶುಕ್ರವಾರ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 69.60 ಕ್ಕೆ ಇಳಿದಿತ್ತು. ಆದಾಗ್ಯೂ, ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ ಮತ್ತು ಸಾಗರೋತ್ತರ ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅಮೆರಿಕಾದ ಕರೆನ್ಸಿಯನ್ನು ದುರ್ಬಲಗೊಂಡಿರುವುದರಿಂದ ಸ್ಥಳೀಯ ಘಟಕದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡುಬಂದಿದೆ. ದೇಶೀಯ ಘಟಕವು ದಿನನಿತ್ಯದ ಗರಿಷ್ಠ ಮತ್ತು ಕಡಿಮೆ ಕ್ರಮವಾಗಿ 70.59 ಮತ್ತು 70.14 ಎಂದು ದಾಖಲಿಸಿದೆ. ಶುಕ್ರವಾರ ರೂಪಾಯಿ ಮೌಲ್ಯ 69.59ಕ್ಕೆ ತಲುಪಿತ್ತು.