ಡಾಲರ್ ಎದುರು ರೂಪಾಯಿ ಮೌಲ್ಯ 9 ಪೈಸೆ ಚೇತರಿಕೆ

    ಮುಂಬೈ, ಆ 8     ಅಮೆರಿಕ ಡಾಲರ್ ಎದುರು ಗುರುವಾರದ ಬೆಳಗಿನ ವಹಿವಾಟಿಟನಲ್ಲಿ ರೂಪಾಯಿ ಮೌಲ್ಯ 9 ಪೈಸೆ ಚೇತರಿಕೆ ಕಂಡು ಒಂದು ಡಾಲರ್ ಬೆಲೆ 70 ರೂಪಾಯಿ 79 ಪೈಸೆಯಷ್ಟಿದೆ.       ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 70.95 ರೂ ಮತ್ತು 70.70 ರೂ.   ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ದುರ್ಬಲಗೊಂಡಿದ ಹಿನ್ನೆಲೆಯಲ್ಲಿ ಮತ್ತು ಷೇರು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿನ ಪರಿಣಾಮ ಈ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.