ಮುಂಬೈ, ಮಾರ್ಚ್ 31, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 12 ಪೈಸೆ ಚೇತರಿಕೆ ಕಂಡು ಒಂದು ಡಾಲರ್ ಬೆಲೆ 75 ರೂಪಾಯಿ 49 ಪೈಸೆಯಷ್ಟಿದೆ.ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 75.53 ರೂ ಮತ್ತು 75.45 ರೂ ನಷ್ಟಿದೆ. ಷೇರು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿನ ಕಾರಣ ರೂಪಾಯಿ ಮೌಲ್ಯ ಏರಿಕೆ ಕಂಡಿದೆ.ಕೊರೊನಾ ವೈರಾಣು ಸೋಂಕು ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆ ಕುಸಿಯುವ ಭೀತಿ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.