ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ಮುಂಬೈ, ಜ 27  ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 14 ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 47 ಪೈಸೆಯಷ್ಟಿದೆ.ರೂಪಾಯಿ ಮೌಲ್ಯದ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.52 ರೂ ಮತ್ತು 71.42 ರೂ ನಷ್ಟಿತ್ತು.ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಬಲಗೊಂಡ ಹಿನ್ನೆಲೆಯಲ್ಲಿ ಮತ್ತು ವಿದೇಶಿ ಹೂಡಿಕೆ ಹೊರಹರಿವಿನ ಹಿನ್ನೆಲೆಯಲ್ಲಿ (ಷೇರು ಮಾರುಕಟ್ಟೆಯ ನಕಾರಾತ್ಮಕ ವಹಿವಾಟಿನ ಕಾರಣ) ಈ ಬೆಳವಣಿಗೆ ಕಂಡು ಬಂದಿದೆ.