ಕಾರವಾರ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ ಅಲ್ಲಿನ ಕೆಲ ಅವ್ಯವಸ್ಥೆಯನ್ನು ನೋಡಿ, ಶಿಕ್ಷಕರೊಂದಿಗೆ ಚಚರ್ಿಸಿ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಗುರುವಾರ ಕೇಂದ್ರ ಸಕರ್ಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹೋರಟಿದ್ದ ಅವರು ದಾರಿ ಮಧ್ಯೆ ಇದ್ದ ಶಾಸಕರ ಮಾದರಿ ಶಾಲೆಗೆ ಭೇಟಿ ನೀಡಿದರು.
ಓರ್ವ ವಿದ್ಯಾಥರ್ಿ ಶಾಲಾ ಕೋಣೆಯಲ್ಲಿ ಮಲಗಿರುವದನ್ನು ಗಮನಿಸಿದ ಶಾಸಕಿ ವಿದ್ಯಾಥರ್ಿಯನ್ನು ಎಬ್ಬಿಸಿ ಆರೋಗ್ಯ ವಿಚಾರಿಸಿದರು. ಆಗ ವಿದ್ಯಾಥರ್ಿಗೆ ಕಿವಿಯಲ್ಲಿ ಕೀವು ಆಗಿದ್ದನ್ನು ಗಮನಿಸಿದ ಶಾಸಕಿ, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರು. ವಿದ್ಯಾಥರ್ಿಗಳನ್ನು ಥಳಿಸುವುದನ್ನು ಮತ್ತು ದೈಹಿಕ ಶಿಕ್ಷೆ ನೀಡುವುದನ್ನು ಮಾಡದಿರುವಂತೆ ಎಚ್ಚರಿಸಿದರು. ಶಾಲೆಯಲ್ಲಿನ ಶೌಚಾಲಯ, ಅಡುಗೆ ಕೋಣೆ, ಬಿಸಿಯೂಟ ವ್ಯವಸ್ಥೆಯನ್ನು ಪರಿಶೀಲಿಸಿದರು. ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದ ಶಾಸಕಿ ಕೆಲ ಸಲಹೆಗಳನ್ನು ನೀಡಿದರು. ಶಾಲೆಯ ಕಟ್ಟಡಕ್ಕೆ 151 ವರ್ಷ ಆಗಿದ್ದು, ಕಟ್ಟಡವನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಸೂಚನೆ ನೀಡಿದರು. ನಗರಸಭೆಯ ಹಿರಿಯ ಸದಸ್ಯರಾದ ಗಣಪತಿ ಉಳ್ವೇಕರ್, ಮನೋಜ ಭಟ್, ಕಿಶನ್ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.