ಲೋಕದರ್ಶನ ವರದಿ
ಬೆಳಗಾವಿ,16 : ಸ್ವಚ್ಛತೆ, ಗ್ರಾಮಗಳ ಶುಚಿತ್ವ, ಗ್ರಾಮೀಣ ಅಭಿವೃದ್ಧಿಗಳು ಎನ್ಎಸ್ಎಸ್ ಘಟಕದ ಪರಿಕಲ್ಪನೆಗಳಾಗಿದ್ದು, ಪ್ರತಿ ಗ್ರಾಮಗಳ ಅಂತಹ ಸಾರ್ವಜನಿಕ ಸಹಕಾರಿ ಘಟಕಗಳಿಗೆ ಕೈಜೋಡಿಸುವ ಅಗತ್ಯತೆ ಇದೆ ಎಂದು ಬಿಜೆಪಿಯ ಯುವ ಮುಖಂಡ ಮಾರುತಿ ಅಷ್ಟಗಿ ಹೇಳಿದರು.
ಅವರು ಇಂದು ಮುಚ್ಚಂಡಿಯಲ್ಲಿ ಕೆ ಎಲ್ ಇ ಜಿ.ಎ. ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿಭಾಗದ ಏಳು ದಿನಗಳ ಶಿಬಿರದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಗ್ರಾಮಮಟ್ಟದಲ್ಲಿ ತಳಹದಿಯಾಗಲು ಎನ್ಎಸ್ಎಸ್ ಘಟಕಗಳು ಸೇವೆಗೈಯುತ್ತಿರುವುದು ಸ್ವಚ್ಛ ಭಾರತ ಅಭಿಯಾನಕ್ಕೆ ಬಲ ತಂದಿವೆ ಎಂದರು.
ಗ್ರಾ.ಪಂ. ಅಧ್ಯಕ್ಷ ಅಶೋಕ ಮೋದಗೇಕರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾ. ಆರ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ವಿ.ಮಠದ ಅತಿಥಿ ಉಪನ್ಯಾಸ ನೀಡಿದರು.
ಪಿಯುಸಿ ವಿಭಾಗದ 50 ವಿದ್ಯಾಥರ್ಿಗಳು ಈ ಏಳು ದಿನಗಳ ಕಾರ್ಯಕ್ರಮದಲ್ಲಿ ರಸ್ತೆ, ಗಟಾರು, ಮೈದಾನ ಶುಚಿತ್ವ, ಸಸಿ ನೆಡುವಿಕೆ, ಇಂಗು ಗುಂಡಿಗಳ ನಿಮರ್ಾಣದ ಯೋಜನೆಯನ್ನು ಹಮ್ಮಿಕೊಂಡು ಚಾಲನೆ ನೀಡಿದರು.ಎನ್ಎಸ್ಎಸ್ ಬಾಗಪ್ಪ ಮಾರದ, ಉಪನ್ಯಾಸಕ ಧನಾಜಿ ಪವಾರ ಹಾಗೂ ಗ್ರಾಮದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.