ಲೋಕದರ್ಶನ ವರದಿ
ಗದಗ 07: ಪರಿಸರ ಸ್ನೇಹಿ ಅಟೋ ವಾಹನಗಳನ್ನು ಓಡಿಸುವದರಿಂದ ಚಾಲಕರು ವೃತ್ತಿಯೊಂದಿಗೆ ಸಮಾಜಸೇವೆ ಮಾಡಿದಂತಾಗುತ್ತದೆ ಎಂದು ಆರ್ಟಿಒ ಬಿ.ಎಚ್. ತೊದಲಬಾವಿ ಅವರು ಹೇಳಿದರು.
ಅವರು ಹುಬ್ಬಳ್ಳಿ ರಸ್ತೆಯಲ್ಲಿರುವ ಚಾಲುಕ್ಯ ಮೋಟಾರ ಶೋರೋಂನಲ್ಲಿ ನಡೆದ ಅಪೇ ಅಟೋ ಡಿಎಕ್ಸ ಎಲ್ಪಿಜಿ ವಾಟರ್ ಕೂಲ್ಡ ವಾಹನವನ್ನು ಉದ್ಘಾಟನೆ ಹಾಗೂ 25 ಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿದ ಆಚರಣೆಯ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಟೋ ಚಾಲಕರು ಇಂದನ ಮಿತವ್ಯಯದ ಬಗ್ಗೆ ತಿಳಿದರೆ ಮಾತ್ರ ವಾಹನವನ್ನು ಹಾಗೂ ಜೀವನವನ್ನು ಸದೃಡವಾಗಿ ಇಡಬಲ್ಲನು, ವಾಹನ ತರಬೇತಿ ಹೆಚ್ಚು ಉಪಯುಕ್ತವಾಗಿರುವದರಿಂದ ಚಾಲಕರು ತರಬೇತಿ ಹೊಂದುವದರೊಂದಿಗೆ ಉಪಯುಕ್ತ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಯಾಜೀಯೋ ಕಂಪನಿಯ ಸೇಲ್ಸ ಮಾನೇಜರ ಬಿ.ಪ್ರಸನ್ನ ಅವರು ಮಾತನಾಡಿ, ಪ್ರಸ್ತುತ ಬಿಡುಗಡೆ ಹೊಂದಿರುವ ವಾಟರ್ ಕೋಲ್ಡ್ ವಾಹನವು ಚಾಲಕರಿಗೆ ಹೆಚ್ಚು ಉಪಯುಕ್ತವಾಗಿದೆ ಅಲ್ಲದೇ, ಹೆಚ್ಚು ಮೈಲೇಜ್ ನೀಡುವದರಿಂದ ಆಥರ್ಿಕವಾಗಿ ಸಬಲರಾಗಬಹುದು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಚಾಲುಕ್ಯ ಮೋಟಾರ್ಸನ ವ್ಯವಸ್ಥಾಪಕ ನಿದರ್ೇಶಕ ರುದ್ದಣ್ಣ ಗುಳಗುಳೀ ಅವರು ಮಾತನಾಡಿ, ಸುದೀರ್ಘ ಹನ್ನೆರಡು ವರ್ಷಗಳಲ್ಲಿ ಗ್ರಾಹಕ ಸೇವೆ ಸಂತೃಪ್ತಿ ತಂದಿದೆ. ಅಲ್ಲದೇ ಪ್ರತಿ 40 ಕಿಮಿ ಗೆ ಗ್ರಾಹಕರ ಸೇವಾ ಕೇಂದ್ರ ಇರುವದರಿಂದ ಗ್ರಾಹಕರು ಸಹ ಕಂಪನಿ ವಾಹನಗಳ ಅಪಾರ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು.
ಚೋಳ ಪೈನಾನ್ಸ್ ಮ್ಯಾನೇಜರ ಮಂಜುನಾಥ ಹಂಪಣ್ಣವರ, ಇಂಡಸ್ಇಂಡ್ ಬ್ಯಾಂಕನ ಮ್ಯಾನೇಜರ ಸೋಮಶೇಖರ ಸೋಮನಕಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಭಾಗ್ಯಲಕ್ಷ್ಮೀ ಕೋರಿ ಸ್ವಾಗತಿಸಿದರು. ಚಾಲುಕ್ಯಾ ಮೋಟಾರ್ಸನ ವ್ಯವಸ್ಥಾಪಕ ದೀಪಕ ಯಲಿಗಾರ ಅವರು ಕಾರ್ಯಕ್ರಮ ರೂಪಿಸಿದರು. ನಾರಾಯಣ ರಾಮೇನಹಳ್ಳಿ ವಂದಿಸಿದರು.