ಬೆಳಗಾವಿ: ರಸ್ತೆ ಸುರಕ್ಷತೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಕುರಿತು ತಾಲೂಕು, ಗ್ರಾಮೀಣ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾಥರ್ಿಗಳ ಮೂಲಕ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಜಾಗೃತಿ ಜಾಥಾ ಆಯೋಜಿಸಿದೆ ಎಂದು ರಾಜ್ಯ ಸುರಕ್ಷತಾ ಪ್ರಾಧಿಕಾರ ಅಪರ ಸಾರಿಗೆ ಆಯುಕ್ತ ಮತ್ತು ನಿದರ್ೇಶಕ ನರೇಂದ್ರ ಹೋಳ್ಳರ ಹೇಳಿದರು.
ಇಲ್ಲಿನ ಕೆಎಲ್ಇ ಜಿರಗಿ ಸಭಾಂಣಗದಲ್ಲಿ ಗುರುವಾರ 23 ರಂದು ಕೇಂದ್ರ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ವತಿಯಿಂದ ಆಯೋಜಿಸಿದ ಮೋಟಾರು ವಾಹನ ಕಾಯ್ದೆ, ಅಪಘಾತ ನಿಯಂತ್ರಣಾ ನಿಯಮಗಳ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿ,
ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಜನ ಅಪಘಾತದಿಂದ ಸಾವನಪ್ಪಿರುವ ಸಂಖ್ಯೆ ದಾಖಲಾಗಿದೆ. ಬೆಳಗಾವಿ ಸೇರಿದಂತೆ ರಾಜ್ಯ ವಿವಿದ ಜಿಲ್ಲೆಯ ವಿದ್ಯಾವಂತರೇ ಪ್ರಾಣಹಾನಿಯಾದ ಆಘಾತಕಾರಿ ಸಂಖ್ಯೆ ಬೆಳಕಿಗೆ ಬಂದಿದೆ. ಇದನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಜಾಗೃತಿ ಜಾಥಾ ಆಯೋಜಿಸಿದೆ. ಇಲ್ಲಿವರಗೆ ಕನರ್ಾಟಕದ ಬೆಳಗಾವಿಯ ಅತೀ ಹೆಚ್ಚು ಜನತೆ ರಸ್ತೆ ಆಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಈ ಸಂಭದಿಸಿದಂತೆ ರಾಜ್ಯದ ಮೂಲೆ ಮೂಲೆಗೂ ರಸ್ತೆ ಸುರಕ್ಷತಾ ನಿಯಮಗಳ ಹಾಗೂ ಮೋಟಾರ ವಾಹನ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜೀವನ ಸುರಕ್ಷತೆಗಾಗಿ ಹೆಲ್ಮೆಟ್ ಬಳಿಸಿ, ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತಗಳ ಸಂಖ್ಯೆ ಕ್ಷೀಣಿಸುತ್ತದೆ. ರಸ್ತೆ ಅಫಘಾತಗಳಾದಾಗ ನೆರವಾಗುವ ಬದಲು ಸುದ್ದಿ ವೈರಲ್ ಮಾಡೋದೆ ಇತ್ತೀಚಿನ ಆದ್ಯತೆಗಳಾಗಿವೆ. ಅದರ ಬದಲು ಒಂದು ಜೀವ ಉಳಿಸಿದರೆ ಒಂದು ಕುಟುಂಬ ಉಳಿಸಿದಂತೆ. ಪ್ರತಿದಿನವೂ ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಅಧಿಕವಾಗಿದೆ. ಅಪಘಾತ ಕಡಿಮೆ ಗೊಳಿಸಲು ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಎಂದರು.
ಈ ಸಂದರ್ಭದಲ್ಲಿ ಶೇಖರ್ ಎನ್. ಡೋಲೆ ಪ್ರಾಧಿಕಾರ ಸದಸ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ, ಡಿವಾಯ್ಎಸ್ಪಿ ಯತಿರಾಜ ಬಿ ಆರ್, ಸಿಐಆರ್ಟಿ ಎಸ್ ಎಸ್ ಧೋರೆ, ಅಶೋಕ ಶಿಂಧೆ, ಪ್ರಶಾಂತ ಕಾಕಡೆ, ಎಸಿಪಿ ಕಲ್ಯಾಣಶೆಟ್ಟಿ ಹಾಗೂ ಇತರರು ಇದ್ದರು.