ನಿಯಮ ಉಲ್ಲಂಘನೆ: ಬೀಜ ಮಾರಾಟ ಪರವಾನಿಗೆ ಅಮಾನತು
ಹಾವೇರಿ, ಏ.21,ಬೀಜ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.ರಾಣೆಬೆನ್ನೂರಿನ "ವೆಂಕಟೇಶ್ವರ ಆಗ್ರೋ ಟ್ರೇಡರ್ಸ್" ಖಾಸಗಿ ಕಂಪೆನಿಯಾಗಿದ್ದು ಈ ಖಾಸಗಿ ಟ್ರೇಡರ್ಸ್ ಸುಮಾರು 12 ವರ್ಷಗಳಿಂದ ರೈತರ ಬೀಜ ಮಾರಾಟ ಮಾಡಿಕೊಂಡು ಬಂದಿದೆ.ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಏಪ್ರಿಲ್ 20 ರಂದು ಈ ಟ್ರೆಡರ್ಸ್ ಮಳಿಗೆಗೆ ವಿಚಕ್ಷಣಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.ಹಾವೇರಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಇವರ ನೇತೃತ್ವದ ವಿಚಕ್ಷಣಾ ತಂಡ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿದಾಗ ಸಂಶಯಾಸ್ಪದ ಬಿತ್ತನೆ ಬೀಜ ಪ್ಯಾಕಿಂಗ್ ಮಾಡುವ ಉಪಕರಣಗಳು ಲಭ್ಯವಾಗಿದ್ದವು. ಬಿಡಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ದುರುದ್ದೇಶದ ಅನುಮಾನ ಕಂಡುಬಂದಿದ್ದು ಇದು ಬೀಜ ಅಧಿನಿಯಮಗಳ ಉಲ್ಲಂಘನೆಯಾಗಿದೆ. ಆದ್ದರಿಂದ ರಾಣೆಬೆನ್ನೂರಿನ "ವೆಂಕಟೇಶ್ವರ ಆಗ್ರೋ ಟ್ರೇಡರ್ಸ್" ಪರವಾನಿಗೆಯನ್ನು ಅಮಾನತು ಮಾಡಿ,ಸಮರ್ಪಕ ಉತ್ತರ ಸ್ಪಷ್ಟ ಕಾರಣ ನೀಡುವಂತೆ ಷೋಕಾಸ್ ನೀಡಲಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 