ರುಕ್ನುದ್ದೀನ್ ಪುಣೆಕರ ನಿಧನ

Ruknuddin Punekar passes away

ವಿಜಯಪುರ 14:    ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರಾದ ಎಸ್‌.ಎ.ಪುಣೆಕರ ಅವರ ಕಿರಿಯ ಸಹೋದರರಾದ ರುಕ್ನುದ್ದೀನ್ ಪುಣೆಕರ (84) ಅವರು ಶುಕ್ರವಾರ ಮಧ್ಯಾಹ್ನ ವಯೋಸಹಜ ಕಾಯಿಲೆಯಿಂದ ನಿಧನರಾದರು.  

ಸುಮಾರು ಮೂವತ್ತು ವರ್ಷಗಳ ಕಾಲ ಮುಂಬಯಿಯಲ್ಲಿ ಇಂಜನಿಯರ ಆಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ನಂತರದಲ್ಲಿ ವಿಜಯಪುರದಲ್ಲಿ ನೆಲೆಸಿ ಸಿಕ್ಯಾಬ ಸಂಸ್ಥೆಯ ಸಿವಿಲ್ ಕಾಮಗಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಮೃತರು ಸಿಕ್ಯಾಬ್ ಶಿಕ್ಷಣ  ಸಂಸ್ಥೆಯ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. 

ಮೃತರಿಗೆ  ಮೂವರು ಪುತ್ರಿಯರು ಹಾಗೂ ಇಬ್ಬರು ಸಹೋದರರು ಇದ್ದಾರೆ. ಅಗಲಿದ ಹಿರಿಯರಿಗೆ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.