ಬಳ್ಳಾರಿ01: 2018-19ನೇ ಸಾಲಿನ ಕಾರ್ಯಕ್ರಮಗಳ ಜಿಪಂ ವಾಷರ್ಿಕ ರೂ.99508.28 ಲಕ್ಷ ಮೊತ್ತದ ಕ್ರಿಯಾಯೋಜನೆಗೆ ಜಿಪಂ ಸಾಮಾನ್ಯ ಸಭೆ ಬುಧವಾರ ಅನುಮೋದನೆ ನೀಡಿತು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಪಂನ 8ನೇ ಸಾಮಾನ್ಯ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಯಿತು.
2018-19ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ನಲ್ಲಿ ಸರಕಾರವು ಜಿಲ್ಲೆಗೆ ಯೋಜನೆ ಅಡಿಯಲ್ಲಿ ರೂ. .99508.28 ಲಕ್ಷ ನಿಗದಿಪಡಿಸಿದೆ.ಇದನ್ನು ಜಿಪಂಗೆ ರೂ.31977.31 ಲಕ್ಷ, ತಾಪಂ ರೂ.67495.97 ಲಕ್ಷ, ಗ್ರಾಪಂ ರೂ.35ಲಕ್ಷ ಅನುದಾನ ವಿಂಗಡಿಸಲಾಗಿದ್ದು, ಈ ನಿಗದಿಪಡಿಸಿದ ಅನುದಾನದಡಿ ಸಿದ್ಧಪಡಿಸಲಾದ ವಾಷರ್ಿಕ ಕ್ರಿಯಾಯೋಜನೆಗೆ, ಅತಿವೃಷ್ಠಿ/ಪ್ರವಾಹದಿಂದ ಹಾನಿಗೊಳಗಾದ ಹಡಗಲಿ ತಾಲೂಕಿನ ಸ್ಥಳಾಂತರಗೊಂಡ 2 ಗ್ರಾಮಗಳಲ್ಲಿ ರಸ್ತೆ, ಚರಂಡಿ ಹಾಗೂ ಸಿಡಿ ಕಾಮಗಾರಿಗಳ ಕ್ರಿಯಾಯೋಜನೆಗೆ, 2018-19ನೇ ಸಾಲಿನಲ್ಲಿ ನೆರೆಪೀಡಿತ ಗ್ರಾಮಗಳ ಸ್ಥಳಾಂತರಗೊಂಡ ಸಂತ್ರಸ್ಥರ ಕಾಲೋನಿಗಳ ಸುಧಾರಣೆ ಕಾಮಗಾರಿಗಳ ಕ್ರಿಯಾಯೋಜನೆಗೆ ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.
*ಅ.2ರೊಳಗೆ ಎಲ್ಲ ಶಾಲೆಗಳಲ್ಲಿ ಕಂಪೌಂಡ್ ನಿಮರ್ಿಸಿ: ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಆರಂಭವಾಗಿರುವ ತಡೆಗೊಡೆ(ಕಂಪೌಂಡ್ ವಾಲ್), ಶೌಚಾಲಯ ಕಾಮಗಾರಿಗಳನ್ನು ಮತ್ತು ಕಿಚನ್ ಗಾರ್ಡನ್ಗಳನ್ನು ಅಕ್ಟೋಬರ್ 2ರೊಳಗೆ ಮುಗಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
*ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇಲ್ಲದಂತೆ ಕ್ರಮ: ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿರುವ ವಿವಿಧ ಹಂತದ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ತಡೆ ಹಾಕುವುದಕ್ಕೆ ತೀಮರ್ಾನಿಸಲಾಗಿದ್ದು, ಜಿಲ್ಲಾ ಖನಿಜ ನಿಧಿ(ಡಿಎಂಎಫ್) ಅಡಿ ಇದಕ್ಕಾಗಿಯೇ ಕಾರ್ಪಸರ್್ ಫಂಡ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಡಿ ಯಲ್ಲಿ ಇರುವ ಹುದ್ದೆಗಳನ್ನು ಗೌರವ ಹುದ್ದೆ ಹೆಸರಿನಲ್ಲಿ ಭತರ್ಿ ಮಾಡಲಾಗುವುದು ಮತ್ತು ಯಾವುದೇ ಹುದ್ದೆಗಳು ಖಾಲಿ ಇರದಂತೆ ನೋಡಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಜೇಂದ್ರ ಅವರು ಹೇಳಿದರು.
ಇದರ ಬದಲಾವಣೆಯನ್ನು ತಾವೆಲ್ಲ 2-3 ತಿಂಗಳಲ್ಲಿಯೇ ಕಾಣುವಿರಿ ಮತ್ತು ಜಿಪಂ ಸದಸ್ಯರ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಶಾಲೆಗಳಲ್ಲಿ ಯಾವ ವಿಷಯದ ಶಿಕ್ಷಕರ ಕೊರತೆ ಇದೆ ಅಂತ ತಿಳಿಸಿದರೇ ಡಿಎಂಎಫ್ ಅಡಿ ಅವುಗಳ ಭತರ್ಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
*ಧೂಪದಳ್ಳಿ ತಾಂಡಾದ 140 ಜನರ ಮೇಲೆ ಕ್ರಿಮಿನಲ್ ಕೇಸ್; ವರದಿ ನೀಡಿ: ಕೂಡ್ಲಿಗಿ ತಾಲೂಕಿನ ಧೂಪದಳ್ಳಿ ತಾಂಡಾದಲ್ಲಿ 4 ವರ್ಷಗಳ ಹಿಂದೆ ಜೆಸ್ಕಾಂನ ವಿಚಕ್ಷಣಾ ತಂಡದವರು ದಾಳಿ ನಡೆಸಿ 140 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಆ. 14 ರೊಳಗೆ ಮಾಹಿತಿ ಒದಗಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಸೂಚನೆ ನೀಡಿದರು.
ಈ ಪ್ರಕರಣವನ್ನು ಅದಾಲತ್ ಅಡಿ ಬಗೆಹರಿಸಲು ಸಾಧ್ಯವೆಂಬುದನ್ನು ಪರಿಶೀಲಿಸಲಾಗುವುದು, ಸಾಧ್ಯವಾದರೇ ಬಗೆಹರಿಸಲಾಗುವುದು. ಇಲ್ಲದಿದ್ದಲ್ಲಿ ಜೆಸ್ಕಾಂ ನೀಡುವ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ತಾಪಂ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚಚರ್ೆ ನಡೆಯಿತು.
ಸಭೆಯಲ್ಲಿ ಶಾಸಕರಾದ ಅಲ್ಲಂ ವೀರಭದ್ರಪ್ಪ, ಈ.ತುಕಾರಾಂ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಸೇರಿದಂತೆ ಜಿಪಂನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜಿಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು