ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 04: ಪಟ್ಟಣದ ಸಕರ್ಾರಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದಜರ್ೆಗೇರಿಸಲು ರೂ.10 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂದು ಶಾಸಕ ಎಸ್.ಭೀಮನಾಯ್ಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಮೈತ್ರಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಭಾರತ ಜ್ಞಾನ ವಿಜ್ಞಾನ ಸಮಿತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೂಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಅಗತ್ಯವಾಗಿದೆ, ಕ್ಷೇತ್ರದ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದ ಸಕರ್ಾರಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದಜರ್ೆಗೇರಿಸಲು ಗಣಿಬಾಧಿತ ಪ್ರದೇಶಗಳ ಅಭಿವೃದ್ದಿ ಯೋಜನೆಯಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು, ಮೂಲಭೂತ ಸೌಲಭ್ಯ ಸೇರಿದಂತೆ ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ದಿವಂಗತ ಜಯಲಕ್ಷ್ಮೀ ಅವರ ಸ್ಮರಣಾರ್ಥ ಚಿತ್ತವಾಡ್ಗಿ ಉಮಾಪತಿ ಕುಟುಂಬದವರು ಬಡವರ ಅನುಕೂಲಕ್ಕಾಗಿ ಪ್ರತಿವರ್ಷ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು. ಮೈತ್ರಿ ಚಾರಿಟಬಲ್ ಟ್ರಸ್ಟ್ನ ವತಿಯಿಂದ ಈಗಾಗಲೆ 13ನೇ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಈ ದಿನ ನಾಲ್ಕು ಸಾವಿರ ಜನರಿಗೆ ನೇತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಬಡವರ ಅನುಕೂಲಕ್ಕಾಗಿ ಸದಾ ಕಾಲ ಸೇವೆ ಮಾಡುವ ಟ್ರಸ್ಟ್ನ ಅಧ್ಯಕ್ಷರಾದ ಅಮರ್ನಾಥ್ ಚಿದ್ರಿ ಅವರ ಕಾರ್ಯ ಶ್ಲಾಘನೀಯ.
ಸಕರ್ಾರಗಳು ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸುವ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದೆ. 2012-13ನೇ ಸಾಲಿನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಸ್ವಚ್ಚತೆಯಲ್ಲಿ ಎರಡನೇ ಪ್ರಶಸ್ತಿಗೆ ಭಾಜನವಾಗಿತ್ತು. ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಆತ್ಮೀಯತೆಯಿಂದ ಸಲಹೆ ನೀಡಿದಲ್ಲಿ ರೋಗಿಯು ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ. ಖಾಸಗಿ ಸಂಘ ಸಂಸ್ಥೆಗಳು ಸಹ ಉಚಿತ ಶಿಬಿರ ಆಯೋಜಿಸುತ್ತಿರುವುದು ಬಡವರಿಗೆ ಅನುಕೂಲವಾಗುತ್ತಿದೆ ಎಂದರು.
ಆರೋಗ್ಯ ಸಮಸ್ಯೆ ಎದುರಾದಾಗ ನಿರ್ಲಕ್ಷ್ಯ ಮಾಡದೆ ಸಕಾಲಕ್ಕೆ ಪ್ರತಿಯೂಬ್ಬರು ಆರೋಗ್ಯ ತಪಾಸಣೆ ನಡೆಸಿಕೊಳ್ಳುವುದು ಸೂಕ್ತ ಎಂದ ಶಾಸಕರು ಬಡವರ ಆರೋಗ್ಯಕ್ಕಾಗಿ ಇಂತಹ ಶಿಬಿರಗಳು ಸಹಕಾರಿಯಾಗುತ್ತಿವೆ ಎಂದರು.
ಮೈತ್ರಿ ಚಾರಿಟಬಲ್ ಗೌರವಾಧ್ಯಕ್ಷ ಬಸವರಾಜ ರೆಡ್ಡಿ ಮಾತನಾಡಿ ಶಾಸಕ ಎಸ್.ಭೀಮನಾಯ್ಕ ಅವರು ಇಂತಹ ಸಮಾಜ ಸೇವೆಯ ಕೆಲಸಗಳಿಗೆ ಸದಾ ಬೆನ್ನೆಲುಬಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ|| ಸುಲೋಚನಾ, ಚಿತ್ತವಾಡ್ಗಿ ಉಮಾಪತಿ ಕುಟುಂಬದವರು ಸೇರಿದಂತೆ ಡಾ. ಶಂಕರನಾಯ್ಕ, ಬಿ.ಜಿ.ವಿ.ಎಸ್. ಅಧ್ಯಕ್ಷ ಬಿ,ಮುಸ್ತಕ್ ಅಹ್ಮದ್, ಮಾಜಿ ಜಿ.ಪಂ.ಸದಸ್ಯ ಅಕ್ಕಿತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂತರ್ಿ, ಮುಖಂಡರಾದ ಮುಟಗನಹಳ್ಳಿ ಕೊಟ್ರೇಶ್, ಬಾಲಣ್ಣ, ಪವಾಡಿ ಹನುಮಂತಪ್ಪ, ಹುಡೇದ್ ಗುರು ಬಸವರಾಜ್, ಡಿಶ್ ಮಂಜಣ್ಣ, ಪ್ರಕಾಶ್ ಇತರರಿದ್ದರು.