ಲೋಕದರ್ಶನ ವರದಿ
ಶಿಗ್ಗಾವಿ 25ಃಯಾರೂ ಕನಸಿನಲ್ಲಿಯೂ ನೆನಪಿಸದಂತಹ ಘಟನೆಯು ಇದಾಗಿದೆ, ಸಾವು ನೋವಿನಿದ ಉಳಿದೋಬ್ಬ ಬಾಲಕ ಗಣೇಶ ಜವಾಬ್ದಾರಿಯನ್ನು ಅವನ ವಿದ್ಯಾಭ್ಯಾಸಕ್ಕೆ ಹಾಗೂ ಇತರೆ ವ್ಯವಸ್ಥೆಗೆ ಸ್ಥಳೀಯ ಮುಖಂಡರುಗಳು ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಅವನ ಭವಿಷ್ಯದ ಕುರಿತು ಕಾನ್ವೇಂಟ್ ಶಾಲೆಯಲ್ಲಿ ಕಲಿಸುವ ಜವಾಬ್ದಾರಿಯನ್ನು ತೆಗದುಕೊಳ್ಳುವದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವಾರಾದ ಜಮೀರ ಅಹ್ಮದ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹೊಸೂರ ಯತ್ನಳ್ಳಿ ಗ್ರಾಮದಲ್ಲಿಯ ಒಂದೆ ಕುಟುಂಬದಲ್ಲಿ 9 ಜನರು ಸಾವನ್ನಪ್ಪಿದ್ದು ಇದೊಂದು ದೊಡ್ಡ ದುರಂತವಾಗಿದ್ದು ಸಾವನಪ್ಪಿದ ಕುಟುಂಬಕ್ಕೆ ತಲಾ ತಲಾ 5 ಲಕ್ಷ ಪರಿಹಾರವನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದು ಈಗಾಗಲೇ ಸರಕಾರವು ಐದು ಲಕ್ಷ ಪರಿಹಾರವನ್ನು ನೀಡುವದಾಗಿ ಘೋಷಣೆಯನ್ನು ಮಾಡಿರುವದಾಗಿ ಹೇಳಿದರು.
ಕಳೆದ ನಾಲ್ಕು ದಿನದ ಹಿಂದೆ ತಾಲೂಕಿನ ಹೊಸೂರ ಯತ್ನಳ್ಳಿ ಗ್ರಾಮದ ಬೆಳವಲಕೊಪ್ಪ ಮನೆತನದ ಕುಟುಂಬಕ್ಕೆ ಗುರುವಾರ ಭೇಟಿ ಮಾಡಿ ಸಾಂತ್ವಾನವನ್ನು ಹೇಳಿದವರು ಅವರ ಮನೆಯಲ್ಲಿರುವ ಅವರ ತಾಯಿ ಕಾಶಮ್ಮ ಹಾಗೂ ಸಹೋದರರನ್ನು ಭೇಟಿ ಮಾಡುತ್ತಿದ್ದಂತೆ ಮೃತರ ಕುಟುಂಬ ಅಕ್ರಂಧನವು ಮುಗಿಲು ಮುಟ್ಟಿತ್ತು.
ಈ ಅವಘಡದಲ್ಲಿ ಉಳಿದ ಎರಡು ಮೃತ ದೇಹದಲ್ಲಿ ಕೀತರ್ಿ ಅನ್ನುವರ ಮೃತ ದೇಹವು ಸಿಕ್ಕಿದೆ ಉಳಿದ ಸಂದೀಪನ ಮೃತ ದೇಹವು ಸಿಗಬೇಕಾಗಿದ್ದು ಅದರ ಕುರಿತು ತಕ್ಷಣವಾಗಿ ಹುಡುಕುವ ಕಾರ್ಯವನ್ನು ಚುರುಕುಗೊಳಿಸಿದ್ದು ಆ ಮೃತ ದೇಹವನ್ನು ತರಿಸುವ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ, ತೀವ್ರಗತಿಯಲ್ಲಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿಗಳಾದ ಡಾ, ವೆಂಕಟೇಶ, ಪೋಲಿಸ್ ವರಿಷ್ಠಧಿಕಾರಿ ಪರಶುರಾಮ, ವಿ.ಪ,ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಬಸವರಾಜ ಶಿವಣ್ಣವರ, ಸಯ್ಯದ ಅಜ್ಜೀಂ ಪೀರ್ ಖಾದ್ರಿ, ಜಿಪಂ ಸದಸ್ಯ ಬಸನಗೌಡ ದೇಸಾಯಿ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಮಲ್ಲಿಕಾಜರ್ುನ ಪಾಟೀಲ, ಡಿಸಿಸಿ ಬ್ಯಾಂಕ್ ನಿದರ್ೇಶಕ ಗಂಗಾಧರ ಸಾತಣ್ಣನವರ, ಡಿವೈಎಸ್ಪಿ ಶಿರಕೋಳ, ಸವಣೂರ ಉಪ ವಿಭಾಗಾಧಿಕಾರಿ ಹರ್ಷಲ್ ಗಳು, ತಹಸೀಲ್ದಾರ ಹಾಗೂ ಜಿಲ್ಲೆಯ ವಿವಿಧ ಜನ ಪ್ರತಿನಿಧಿಗಳು, ಮುಖಂಡರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.