ಲೋಕದರ್ಶನ ವರದಿ
ಘಟಪ್ರಭಾ: ಆರು ವರ್ಷಗಳ ನಿರಂತರ ಪ್ರಯತ್ನದ ಪ್ರತಿಫಲವಾಗಿ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿಗೆ ನಮ್ಮ ಸಕರ್ಾರ 833 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಘಟಪ್ರಭಾ ಎಡದಂಡೆ ಕಾಲುವೆ ಭಾಗದ ರೈತ ಸಮೂಹಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ಇಲ್ಲಿಯ ಜಿಎಲ್ಬಿಸಿ ಮುಖ್ಯ ಕಾಲುವೆ ಬಳಿ ಘಟಪ್ರಭಾ ಎಡದಂಡೆ ಕಾಲುವೆಯ 833 ಕೋಟಿ ರೂ. ಮೊತ್ತದ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಅನುಷ್ಠಾನದಿಂದಾಗಿ ರೈತರ ಬದುಕು ಪಾವನವಾದಂತಾಗಿದೆ. ನಮ್ಮ ಪ್ರಯತ್ನಕ್ಕೆ ಸಕರ್ಾರ ಅನುದಾನ ನೀಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.
2013 ರಲ್ಲಿ ಅಸ್ಥಿತ್ವದಲ್ಲಿದ್ದ ಕಾಂಗ್ರೇಸ್ ಸಕರ್ಾರದಲ್ಲಿ ಈ ಕಾಮಗಾರಿಗೆ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಜೂರಾತಿ ನೀಡಿದ್ದರು. ಜೊತೆಗೆ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನಮ್ಮೊಂದಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದರು. ಆದರೆ ಈ ಕಾಮಗಾರಿಗೆ ಅನುದಾನ ನೀಡಲು ನಮ್ಮ ಸಕರ್ಾರ ಬರಬೇಕಾಯಿತು. ಆದ್ದರಿಂದ ಸಮಸ್ತ ರೈತರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಅಭಿನಂದಿಸುತ್ತೇನೆಂದು ಅವರು ಹೇಳಿದರು.
ತುಕ್ಕಾನಟ್ಟಿ, ನಾಗನೂರ, ಮೂಡಲಗಿ, ಶಿವಾಪೂರ(ಹ) ಹೊಸ ವಿತರಣಾ ಕಾಲುವೆಗಳ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಲಾಗುವುದು. ರಾಜಾಪೂರ ಮತ್ತು ಮೂಡಲಗಿ ಹಳ್ಳಕ್ಕೆ ಮುಂದಿನ ದಿನಗಳಲ್ಲಿ ಎಸ್ಕೇಪ್ಗಳನ್ನು ಕೂಡ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಗೋಕಾಕ, ಮೂಡಲಗಿ, ರಾಯಬಾಗ, ಜಮಖಂಡಿ, ತಾಲೂಕುಗಳ ಎಲ್ಲ ರೈತ ಸಮುದಾಯಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಎಲ್ಬಿಸಿಗೆ ಒಳಪಡುವ ಕಾಲುವೆಗಳು : ಮುಖ್ಯ ಕಾಲುವೆ 0.00 ಕಿ.ಮೀ ದಿಂದ 74.00 ಕಿ.ಮೀವರೆಗೆ ಹಾಗೂ ಕಿ.ಮೀ 107.00 ಹಾಗೂ 109.00 ಕಿ.ಮೀಗಳಲ್ಲಿ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಹಾಗೂ ಆಯ್ದ ಹಾಳಾಗಿರುವ ಕಟ್ಟಡಗಳ ಪುನರ್ ನಿಮರ್ಾಣ. ಗೋಕಾಕ ಶಾಖಾ ಕಾಲುವೆ ಕಿ.ಮೀ 0.00 ರಿಂದ 20.00 ರವರೆಗೆ, ಸೈದಾಪೂರ ಶಾಖಾ ಕಾಲುವೆ ಕಿ.ಮೀ 0.00 ರಿಂದ 8.00 ರವರೆಗೆ, ಮುನ್ಯಾಳ, ಢವಳೇಶ್ವರ, ಹಳ್ಳೂರ ಉತ್ತರ ಕಾಲುವೆ ಒಟ್ಟು 13.00 ಕಿ.ಮೀ.ಗಳಲ್ಲಿ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಹಾಗೂ ಆಯ್ದ ಹಾಳಾಗಿರುವ ಕಟ್ಟಡಗಳ ಪುನರ್ ನಿಮರ್ಾಣ ಮತ್ತು ಬೀಳಗಿ ಶಾಖಾ ಕಾಲುವೆಯ ಆಯ್ದ ಕಟ್ಟಡಗಳ ಪುನರ್ ನಿಮರ್ಾಣ ಈ ಕಾಮಗಾರಿಯಲ್ಲಿ ಸೇರಿದ್ದು, 833 ಕೋಟಿ ಬೃಹತ್ ಮೊತ್ತದ ಕಾಮಗಾರಿಯನ್ನು ಡಿ.ವಾಯ್. ಉಪ್ಪಾರ ಅವರ ಕಂಪನಿಗೆ ನೀಡಲಾಗಿದೆ. ತ್ವರೀತಗತಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಘಟಪ್ರಭಾ ಎಡದಂಡೆ ಕಾಲುವೆಯು ಧುಪದಾಳ ಜಲಾಶಯದಿಂದ ಆರಂಭವಾಗಿದ್ದು, ಧುಪದಾಳ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಜಲಾಶಯ ನಿಮರ್ಿಸಲಾಗಿದ್ದು, ಇದರ ಸಂಗ್ರಹಣಾ ಸಾಮಥ್ರ್ಯವು 0.37 ಟಿಎಂಸಿ ಇದ್ದು, ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ತಲಾ 3 ತಾಲೂಕುಗಳು ಸೇರಿ 109 ಕಿ.ಮೀ ಉದ್ದವಿದ್ದು, ಇದರಿಂದ 4 ಲಕ್ಷ ಎಕರೆ ನೀರಾವರಿ ಕ್ಷೇತ್ರವಾಗಿದೆ ಎಂದು ಅವರು ತಿಳಿಸಿದರು.
ನೀರು ಪೋಲಾಗಿ ಕಾಲುವೆಯ ಕೊನೆಯ ಭಾಗದ ಸುಮಾರು 80 ಸಾವಿರಕ್ಕೂ ಅಧಿಕ ಎಕರೆ ಅಚ್ಚುಕಟ್ಟು ಕ್ಷೇತ್ರವು ನೀರಾವರಿ ಸೌಲಭ್ಯದಿಂದ ವಂಚಿತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಲುವೆಯ ಆಧುನೀಕರಣ ಕಾಮಗಾರಿಯನ್ನು ಕೈಗೊಂಡಿದ್ದು, ಇದರ ಮೂಲ ಉದ್ಧೇಶ ನೀರಿನ ಸೋರಿಕೆ ಕಡಿಮೆ ಮಾಡಿ ಕಾಲುವೆಯ ಕೊನೆಯ ಭಾಗದ ನೀರಾವರಿ ವಂಚಿತ ಅಚ್ಚುಕಟ್ಟು ಕ್ಷೇತ್ರಕ್ಕೆ ಸಮರ್ಪಕವಾಗಿ ನೀರನ್ನು ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಆರ್ಬಿಸಿ ಆಧುನೀಕರಣಕ್ಕೆ ಒತ್ತು : ಘಟಪ್ರಭಾ ಎಡದಂಡೆ ಕಾಲುವೆಯ ಆಧುನೀಕರಣಕ್ಕೆ ಕಾಮಗಾರಿ ಕೈಗೆತ್ತಿಕೊಂಡಂತೆ ಮುಂದಿನ ದಿನಗಳಲ್ಲಿಯೂ ಘಟಪ್ರಭಾ ಬಲದಂಡೆ ಕಾಲುವೆಯ ಆಧುನೀಕರಣಕ್ಕೆ ಒತ್ತು ನೀಡಲಾಗುವುದು. ರೈತರ ಶ್ರೇಯೋಭಿವೃದ್ಧಿಯೇ ನಮ್ಮ ಸಕರ್ಾರದ ಪ್ರಮುಖ ಗುರಿಯಾಗಿದೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಅರಭಾವಿ ಮತಕ್ಷೇತ್ರವನ್ನು ಹಸಿರಿನಿಂದ ಕಂಗೊಳಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನಿದರ್ೇಶಕರಾದ ಸಂಜೀವ ಬಾನೆ, ಶಿವಪ್ಪ ನಾಯಿಕ, ಅಣ್ಣಪ್ಪ ಘಂಟಿ, ಅಜರ್ುನ ನಾಯಿಕವಾಡಿ, ಬಸವರಾಜ ಕಲ್ಲಟ್ಟಿ, ಎಸ್.ಆರ್. ಸಂಗೋಟಿ, ಬಸವರಾಜ ಪಂಡ್ರೊಳ್ಳಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಸುಧೀರ ಜೋಡಟ್ಟಿ, ಬಸವಂತ ಕಮತಿ, ಹನಮಂತ ತೇರದಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಮುತ್ತೆಪ್ಪ ಕುಳ್ಳೂರ, ಧುಪದಾಳ ಗ್ರಾಪಂ ಅಧ್ಯಕ್ಷ ಎಸ್.ಐ. ಬೆನವಾಡೆ, ತಾಪಂ ಸದಸ್ಯ ಲಗಮಣ್ಣಾ ನಾಗನ್ನವರ, ಕಾರ್ಯನಿವರ್ಾಹಕ ಅಭಿಯಂತರ ಚನ್ನಬಸಪ್ಪ, ಎಇಇ ಯಶವಂತಕುಮಾರ, ಮಲ್ಲಿಕಾಜರ್ುನ ಕೋಟಿ, ಘಟಪ್ರಭಾ ಎಡದಂಡೆ ಕಾಲುವೆ ಭಾಗದ ಅನೇಕ ರೈತರು, ಚುನಾಯಿತ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.