ಮರಳು ಪ್ರತಿ ಮೆ.ಟನ್ಗೆ ರೂ.645 ದರ ನಿಗದಿ: ಡಿಸಿ

ಬಾಗಲಕೋಟೆ:ಜಿಲ್ಲೆಯಲ್ಲಿ ಮರಳು ಮಾರಾಟಕ್ಕೆ ಪ್ರತಿ ಮೆ.ಟನ್ಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿಗೆ ಗುತ್ತಿಗೆದಾರರು ಮಾರಾಟ ಮಾಡಿದಲ್ಲಿ ಅವರ ಕೇಸ್ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ ಪೋರ್ಸ ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಒಂದು ಮೆಟ್ರಿಕ್ ಟನ್ಗೆ 480 ರೂ.ರಂತೆ ಮಾರಾಟ ಮಾಡಲು ದರ ನಿಗಧಿಯಾಗಿತ್ತು, ಪ್ರಸ್ತುತ ಗುತ್ತಿಗೆದಾರರು ಮಾರುಕಟ್ಟೆಯಲ್ಲಿ ಎಲ್ಲ ದರಗಳು ಹೆಚ್ಚಿಗಿರುವುದರಿಂದ ಮರಳಿನ ಬೆಲೆಯನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ದರವನ್ನು ಹೆಚ್ಚಿಸಲಾಗಿದೆ ಎಂದರು.

ದರ ಪರಿಷ್ಕರಣೆಯ ಬಗ್ಗೆ ಪಕ್ಕದ ಜಿಲ್ಲೆಗಳಾದ ಗದಗ, ಚಿತ್ರದುರ್ಗಗಳ ಬಗ್ಗೆ ಚಚರ್ಿಸಲಾಗಿ ಒಂದು ಮೆ.ಟನ್ಗೆ 900 ರಿಂದ 950 ರೂ.ಗಳಿಗೆ ಮಾರಾಟ ನಿಗದಿಪಡಿಸಿರುವುದನ್ನು ತಿಳಿದು ಬಂದಿತು. 

ಜಿಲ್ಲೆಯ ಜನರಿಗೆ ಮರಳು ಬಾರವಾಗದಂತೆ ಹಾಲಿ ದರ 480 ರೂ.ಗಳಿಗೆ 165 ರೂ.ಗಳನ್ನು ಮಾತ್ರ ಹೆಚ್ಚಿಸಲಾಗಿದೆ. ಸರಕಾರದ ಎಸ್ಆರ್ ದರ ಪ್ರತಿ ಮೆ.ಟನ್ಗೆ 970 ರೂ. ಇದ್ದು ಅದಕ್ಕಿಂತ ಕಡಿಮೆ ದರ ನಿಗದಿಪಡಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

          ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಕೋರಿ ಬಾದಾಮಿ ತಾಲೂಕಿನಿಂದ 11 ಹಾಗೂ ಹುನಗುಂದ ತಾಲೂಕಿನಿಂದ 1 ಅಜರ್ಿಗಳು ಬಂದಿದ್ದು, ಸ್ಥಳ ಪರಿಶೀಲಿಸಿ ಮರಳು ಲಭ್ಯತೆಯ ಬಗ್ಗೆ ಮಾದರಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷಿಸಿಕೊಂಡು ಕಟ್ಟಡ ಕಾಮಗಾರಿಗಳಿಗೆ ಯೋಗ್ಯವಿರುವ ಬಗ್ಗೆ ಮಾಹಿತಿ ನೀಡಿದ ನಂತರ ಅನುಮತಿಗಾಗಿ ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗುವುದೆಂದರು. ಈಗಾಗಲೇ 16 ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದ್ದು, 

ನದಿ ಪಾತ್ರದಲ್ಲಿ ಹೊಸ ಮರಳು ಬ್ಲಾಕ್ಗಳನ್ನು ಗುರುತಿಸುವ ಕುರಿತಂತೆ ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದ ಕೃಷ್ಣಾ ನದಿ ಪಾತ್ರದ 5 ಬ್ಲಾಕ್ಗಳಿಂದ ಒಟ್ಟು 121.410 ಕ್ಯೂ.ಮೀ ಮರಳು ಲಭ್ಯವಿದ್ದು, ಇ-ಟೆಂಡರ ಮೂಲಕ ವಿಲೇ ಮಾಡಲು ಟೆಂಡರ ಕರೆಯಲಾಗಿದ್ದು, ಟೆಂಡರದಾರರು 2829 ರೂ.ಗಳಿಗೆ ಬಿಡ್ ಮಾಡಿದ್ದು, ದರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗಿರುವದರಿಂದ ಸದರಿ ಟೆಂಡರ್ ತಿರಸ್ಕರಿಸಲು ನಿರ್ದರಿಸಲಾಯಿತು. ಈ ಟೆಂಡರ 2 ವರ್ಷ ವಿಳಂಬವಾಗಿದ್ದರಿಂದ ಶಾರ್ಟಟರ್ಮ ಟೆಂಡರ ಕರೆಯಲು ತಿಳಿಸಿದರು.

        ಪಿಂಕ್ ಗ್ರಾನೈಟ್ ಗುತ್ತಿಗೆ ಕೋರಿ ಮಂಜೂರಾತಿ, ನವೀಕರಣ ಲೈಸನ್ಸಗಾಗಿ 5 ಅಜರ್ಿಗಳು ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿಮರು ಮಂಡನೆ ಮಾಡಲು ತಿಳಿಸಿದರು. ಪಟ್ಟಾ ಜಮೀನುಗಳಲ್ಲಿ ಎಂ-ಸ್ಯಾಂಡ್ ಉತ್ಪಾದಿಸಲು ಕಲ್ಲು ಗಣಿ ಗುತ್ತಿಗೆ ಮಂಜೂರಾತಿ, ಲೈಸನ್ಸ್ ಕೋರಿ ಬಂದ ಅರ್ಜಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಜೆಲ್ಲಿ ಕಲ್ಲು ಕ್ರಷರ್ ಘಟಕ ಸ್ಥಾಪಿಸಲು ಲೈಸನ್ಸ್ಗಾಗಿ ಫಾರ್ಮ ಬಿ1 ಕೋರಿ 7 ಅಜರ್ಿಗಳು ಬಂದಿದ್ದು, ಮತ್ತೊಮ್ಮೆ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮಜರುಗಿಸಲಾಗುವುದೆಂದು ತಿಳಿಸಿದರು.   

ಅಕ್ರಮ ಮರಳು ಸಾಗಾಣಿಗೆ ತಡೆಯುವ ನಿಟ್ಟಿನಲ್ಲಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಟ್ರ್ಯಾಕಿಂಗ್ ಮಾಡುವ ಕುರಿತು ರಾನೆ ಟೆಲಿಮ್ಯಾಟ್ ಕಂಪನಿಯವರು ಪಿಪಿಟಿ ಮೂಲಕ ಸವಿವರರವಾಗಿ ಸಭೆಯಲ್ಲಿ ಮಂಡಿಸಿದರು. ಈ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಲು ಬಗ್ಗೆ ಚಚರ್ಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಉಪವಿಭಾಗಾಧಿಕಾರಿಗಳಾಧ ಎಚ್.ಜಯಾ, ಮೊಹಮ್ಮದ ಇಕ್ರಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿದರ್ೇಶಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮನಿಯಾರ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.