ಸಣ್ಣ , ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ 50 ಸಾವಿರ ಕೋಟಿ ರೂ ನೆರವು: ಆರ್ ಬಿಐ

ನವದೆಹಲಿ, ಏ 17,ಕೇಂದ್ರ ಹಣಕಾಸು ಸಚಿವೆ  ನಿರ್ಮಲ ಸೀತಾರಾಮನ್  ಪ್ರಧಾನಿ  ಜತೆ ಮಾತುಕತೆ  ನಡೆಸಿದ  ಬೆನ್ನಲ್ಲೇ  ದೇಶದ  ಆರ್ಥಿಕ  ಉತ್ತೇಜನ ನೀಡುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಸಣ್ಣ ಹಾಗೂ ಮಧ್ಯಮ  ಕೈಗಾರಿಕೆಗಳ ಪುನಶ್ಚೇತನಕ್ಕೆ 50,ಸಾವಿರ ಕೋಟಿ ರೂ.ನೆರವು ಹಾಗೂ ಕೋವಿಡ್  ವಿರುದ್ಧ ಹೋರಾಟಕ್ಕೆ ಎಲ್ಲ ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ ನೀಡಲು ನಿರ್ಧರಿಸಿದೆ.  ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದೇಶ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು  ದೆಹಲಿಯಲ್ಲಿ  ಇಂದು ಹಲವು ಪ್ರಮುಖ ತೀರ್ಮಾನ ಪ್ರಕಟಿಸಿದ್ದಾರೆ. ಆರ್ಬಿಐನಿಂದ ಬ್ಯಾಂಕ್ಗಳು ಪಡೆಯುವ ಹಣಕ್ಕೆ ನೀಡುವ ಬಡ್ಡಿ ಇಳಿಕೆಗೆ ನಿರ್ಧರಿಸಿರುವ ಆರ್ಬಿಐ ರಿವರ್ಸ್ ರೆಪೋ ದರವನ್ನು ಶೇ.3.75ಕ್ಕೆ ಇಳಿಸಿದೆ.ರೈತರಿಗೆ ನೆರವಾಗಲು ನಬಾರ್ಡ್ಗೆ 25,000 ಕೋ.ರೂ., ವಸತಿ ವ್ಯವಸ್ಥೆಗಳಿಗೆ ನ್ಯಾಶನಲ್ ಹೌಸಿಂಗ್ ಬ್ಯಾಂಕಿಂಗ್ಗೆ 10,000 ಕೋ.ರೂ. ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ(ಎಸ್ಐಡಿಬಿಐ)15,000 ಕೋ.ರೂ.ನೀಡಲಾಗುವುದು ಎಂದು ಆರ್ಬಿಐ ಗವರ್ನರ್ ದಾಸ್ ತಿಳಿಸಿದ್ದಾರೆ.ಶೇ.91ರಷ್ಟು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದು ಸಮರ್ಪಕ  ಹಣದ ಹರಿವಿನ ಮೂಲಕ ಬ್ಯಾಂಕ್ ಗಳಿಗೆ  ಹಣದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ .