ಲೋಕದರ್ಶನ ವರದಿ
ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ 5.60 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಸೋಧ್ಯಮ ಇಲಾಖೆ ನೀಡಿರುವ ಅನುದಾನದಲ್ಲಿ ಶೌಚಾಗೃಹ, ಭಕ್ತರ ವಾಸ್ತವ್ಯಕ್ಕೆ ತಂಗುದಾನ ಹಾಗೂ ಭಕ್ತರ ವಸ್ತುಗಳನ್ನು ಸುರಕ್ಷೀತವಾಗಿ ಇಡುವದಕ್ಕೆ ಲಗೆಜ್ ರೂಂ ನಿಮರ್ಾಣ ಮಾಡಲಾಗುವುದು ಎಂದು ತಿಳಿಸಿದರು. ವಿವಿಧ ಇಲಾಖೆಗಳಿಂದ ಇಗಾಗಲೇ ಬಿಡುಗಡೆಯಾಗಿದ್ದ 98 ಕೋಟಿ ರೂ ಮೋತ್ತದಲ್ಲಿ ಹಲವು ಅಭಿವೃದ್ದಿ ಚಟುವಟಿಕೆ ನಡೆಯುತ್ತಿವೆ, ಈಗ ಪ್ರವಾಸೋಧ್ಯಮ ಇಲಾಖೆ ಬಿಡುಗಡೆ ಮಾಡಿರುವ 5.60 ಕೋಟಿಯಲ್ಲಿ ವಿವಿಧ ಅಭಿವೃದ್ದಿ ಚಟುವಟಿಕೆ ಕೈಗೊಂಡು ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಸೋಧ್ಯಮ ಕ್ಷೇತ್ರವನ್ನು ವೃದ್ದಿಸಲಾಗುವುದು ಹೆಚ್ಚಿನ ಸೌಕರ್ಯಗಳ ಮುಖಾಂತರವಾಗಿ ಭಕ್ತರು ಹಾಗೂ ಪ್ರವಾಸಿಗರನ್ನು ಸೇಳೆಯಲು ಪ್ರಯತ್ನಿಸಲಾಗುವದೆಂದು ತಿಪರಾಶಿ ತಿಳಿಸಿದರು.
ಯಲ್ಲಮ್ಮನಗುಡ್ಡದಲ್ಲಿ ಸ್ಥಾಳ ಅಭಿವೃದ್ದಿ ಬೀದಿ ದೀಪಗಳ ಅಳವಡಿಕೆ ಇತ್ಯಾದಿ ಕಾಮಗಾರಿಗಳಿಗಾಗಿ 4.80 ಕೋಟಿ ರೂ ಮೋತ್ತದ ಯೋಜನೆ ಸಿದ್ದಪಡಿಸಿ ಗ್ರಾಮೀನಾಭಿವೃದ್ದಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಗೆ ಪ್ರಸ್ಥಾವಣೆ ಸಲ್ಲಿಕೆ ಮಾಡಲಾಗಿದೆ ಆಥರ್ಿಕ ಇಲಾಖೆ ಇದಕ್ಕೆ ಒಪ್ಪಿಗೆ ನಿಡಿದ್ದು ಶೀಘ್ರ ಬಿಡುಗಡೆಯಾಗಲಿರುವ ಅನುದಾನದಲ್ಲಿ ಹಲವು ಅಭಿವೃದ್ದಿ ಕೆಲಸ ಮಾಡಲಾಗುವುದು ಯಲ್ಲಮ್ಮನಗುಡ್ಡ ಪ್ರಸಿದ್ದ ಶಕ್ತಪೀಠ, ಇಲ್ಲಿ ಪ್ರವಾಸೋಧ್ಯಮ ವೃದ್ದಿಗೆ ಆಧ್ಯತೆ ನೀಡುತ್ತೆವೆ ಎಂದು ತಿಪರಾಶಿ ಹೇಳಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.