ಸ್ಫೋಟದಲ್ಲಿ ಮೃತರಾದವರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ : ಡಾ ಜಿ ಪರಮೇಶ್ವರ್

ಬೆಳಗಾವಿ: 17 : ಬಾಗಲಕೋಟೆ ಜಿಲ್ಲೆಯ ಖಾಸಗಿ ಸಕ್ಕರೆ ಕಾಖರ್ಾನೆಯ ಸಂಸ್ಕರಣಾ ಘಟಕದಲ್ಲಿ ಭಾನುವಾರ ನಡೆದ ಸ್ಪೋಟ ಪ್ರಕರಣದಲ್ಲಿ ಮೃತರಾದ ನಾಲ್ವರ ಕುಟುಂಬಗಳಿಗೂ ಕೂಡಾ ರಾಜ್ಯ ಸಕರ್ಾರ ತಲಾ ಐದು ಲಕ್ಷ ರೂ. ಪರಿಹಾರವನ್ನು ನೀಡಲಿದೆ ಎಂದು ಗೃಹ ಖಾತೆಯನ್ನು ಹೊತ್ತ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ರಾಜ್ಯ ವಿಧಾನ ಸಭೆಯಲ್ಲಿ ಸೋಮವಾರ 

ಪ್ರಕಟಿಸಿದರು. 

     ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕರಿಯಣ್ಣ ಅವರ ನಿಧನಕ್ಕೆ ಮಾತ್ರವಲ್ಲದೆ ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ದುರಂತಗಳಲ್ಲಿ ಸಾವನ್ನಪ್ಪಿದ ಜನರಿಗೆ ಇಂದು ಸದನದ ಕಲಾಪ ಪ್ರಾರಂಭಕ್ಕೂ ಮುನ್ನ ಸಭಾಧ್ಯಕ್ಷ ಕೆ. ಆರ್. ರಮೇಶ್ಕುಮಾರ್  ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.

ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚಗುತ್ ಮಾರಮ್ಮ ದೇವಸ್ಥಾನ ಗೋಪುರದ ಶಿಲಾನ್ಯಾಸ ಸಮಾರಂಭದಲ್ಲಿ ವಿತರಿಸಲಾದ ಪ್ರಸಾದವನ್ನು ಸೇವಿಸಿ ಇಬ್ಬರು ಮಕ್ಕಳೂ ಒಳಗೊಂಡಂತೆ ಒಟ್ಟು ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. ಇನ್ನೂ 108 ಜನರು ಮೈಸೂರು ಭಾಗದ 13 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಬೇಗ ಗುಣಮುಖರಾಗಲಿ. ಮೃತರ ಕುಟುಂಬಗಳಿಗೆ ಆಥರ್ಿಕ ನೆರವು ಒದಗಿಸುವುದರ ಜೊತೆಗೆ ಧೈರ್ಯ ತುಂಬುವ ಕಾರ್ಯವನ್ನು ಸಕರ್ಾರ ಮಾಡಲಿ ಎಂದು ಸಭಾಧ್ಯಕ್ಷರು ಹೇಳಿದರು. 

ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ಅವರು ಚಾಮರಾಜನಗರ ಜಿಲ್ಲೆಯ ದೇವಸ್ಥಾನದಲ್ಲಿ ನಡೆದ ದುರ್ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಸಾವಿಗೆ ಕಾರಣವಾದ ಪ್ರಸಾದವನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಪ್ರಸಾದದಲ್ಲಿ  ಕೀಟನಾಶಕದಲ್ಲಿ ಕಂಡು ಬರುವ ಮಾನೋಪ್ರೋಟ್  ರಾಸಾಯನಿಕ ಅಂಶವಿದೆ ಎಂದು ತಿಳಿದು ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇತರೆ ಅಂಶಗಳೂ ಬೆಳಕಿಗೆ ಬರಲಿವೆ. ಪ್ರಕರಣ ಕುರಿತಂತೆ ಈಗಾಗಲೇ ತನಿಖೆ ಪ್ರಾರಂಭಿಸಿ ಏಳು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕೆಲವರು ಹಳ್ಳಿಯನ್ನು ತೊರೆದಿದ್ದು, ಅವರಿಗಾಗಿ ಶೋಧ ಕಾರ್ಯ ಕೂಡಾ ಪ್ರಾರಂಭವಾಗಿದೆ. ಸಕರ್ಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಅವರು ಸದನಕ್ಕೆ ತಿಳಿಸಿದರು.  

ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಕರಿಯಣ್ಣ ಅವರನ್ನು ತಮ್ಮ ಆತ್ಮೀಯ ಗೆಳೆಯರಲ್ಲೊಬ್ಬರಾಗಿದ್ದರು ಎಂದು ಬಣ್ಣಿಸಿದರು. 

ಸುಳ್ವಾಡಿ ದುರ್ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಮಾನವೀಯತೆಯ ದೃಷ್ಠಿಯಿಂದ ಸಕ್ಕರೆ ಕಾಖರ್ಾನೆಯ ದುರಂತದಲ್ಲಿ ಮಡಿದವರ ಕುಟುಂಬಗಳಿಗೂ ಸಕರ್ಾರ ಪರಿಹಾರ ನೀಡಬೇಕು ಎಂದು ತಮ್ಮ ಮನದಾಳದ ಮಾತುಗಳನ್ನು 

ಹೊರಹಾಕಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರು ಸುಳ್ವಾಡಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ರಾಜ್ಯ ಸಕರ್ಾರ ಐದು ಲಕ್ಷ ರೂ. ಪರಿಹಾರವನ್ನು 

ಘೋಷಿಸಿದೆ. ಇದರ ಜೊತೆಗೆ ಸಕರ್ಾರದ ವಿವಿಧ ಯೋಜನೆಗಳಡಿ ದೊರೆಯುವ ಸವಲತ್ತುಗಳನ್ನೂ ವಿಸ್ತರಿಸುವಲ್ಲಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಸಕರ್ಾರಕ್ಕೆ ಸಲಹೆ ನೀಡಿದರು. 

ಸುಳ್ವಾಡಿ ಪ್ರಕರಣದ ಕರಾಳ ನೆನಪು ಮಾಸುವ ಮುನ್ನವೇ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಸಮೀಪ ಶಾಸಕ ಮುರುಗೇಶ್ ನಿರಾಣಿ ಅವರ ಒಡೆತನಕ್ಕೆ ಸೇರಿದ ಸಕ್ಕರೆ ಕಾಖರ್ಾನೆಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ ತ್ಯಾಜ್ಯ ವಸ್ತು ನಿರ್ವಹಣೆಯ ಮಿಥೇನ್ ಗ್ಯಾಸ್ನ ಸುರಕ್ಷತಾ ಕವಾಟ (ಸೇಫ್ಟಿವಾಲ್ವ್) ದಲ್ಲಿ ಉಂಟಾದ ಸಮಸ್ಯೆಯಿಂದ ಸ್ಫೋಟ ಉಂಟಾಗಿ ನಾಲ್ಕು ಜನ ಮೃತ ಪಟ್ಟಿರುವುದು ಖೇದಕರ ಸಂಗತಿಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಅವರ ಕುಟುಂಬಗಳಿಗೆ ಮೃತರ ಅಗಲಿಕೆಯಿಂದ ಉಂಟಾದ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ  ಎಂದು ಅವರು ಭಗವಂತನಲ್ಲಿ ಪ್ರಾಥರ್ಿಸಿದರು.  

ಹನೂರು ಶಾಸಕ ಆರ್. ನಾಗೇಂದ್ರ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ  ಸುಳ್ವಾಡಿಯ ಮಾರಮ್ಮ ದೇವಸ್ಥಾನ ಖಾಸಗಿ ಒಡೆತನಕ್ಕೆ ಸೇರಿದೆ. ಗೋಪುರ ನಿಮರ್ಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹದಿನೈದು ಕೆ.ಜಿ. ಅಕ್ಕಿಯನ್ನು ಬಳಸಿ ತಯಾರಿಸಿದ ಪ್ರಸಾದವನ್ನು ಜನರಿಗೆ ಹಂಚಲಾಗಿತ್ತು. 

ಪ್ರಸಾದ ತಿಂದವರು ಅಸ್ವಸ್ಥರಾಗಿ ಸಾವನ್ನಪ್ಪುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ, ಪ್ರಕರಣದ ಗಂಭೀರತೆಯನ್ನು ಮನಗಂಡು ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ಮುಖ್ಯಮಂತ್ರಿಯವರು ಕೂಡಲೇ ಸ್ಪಂದಿಸಿ ಸಕರ್ಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಟ್ಟರು. 

ಇಲ್ಲವಾದಲ್ಲಿ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿತ್ತು. ಖಾಸಗಿ ಆಸ್ಪತ್ರೆಗಳ ವೈದ್ಯರೂ ಕೂಡಾ ಹಣದ ಬಗ್ಗೆ ಚಿಂತಿಸದೆ ಸಕಾಲಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.

ಇಂತಹ ದುರ್ಘಟನೆಗಳು ಎಂದೂ ಎಲ್ಲೂ ಮರುಕಳಿಸಬಾರದು. ಆದಕಾರಣ, ಸಕರ್ಾರ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆ ನೀಡಿದ ಸಭಾಧ್ಯಕ್ಷರು ಚಚರ್ೆಗೆ ತೆರೆ ಎಳೆದರು.