ಮೃತರಿಗೆ 2.5 ಲಕ್ಷ ರೂ. ಪರಿಹಾರ: ಸಚಿವ ಪಾಟೀಲ

ಬಾಗಲಕೋಟೆ 17: ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿರುವ ಮುರುಗೇಶ ನಿರಾಣಿ ನೇತೃತ್ವದ ಸಕ್ಕರೆ ಕಾಖರ್ಾನೆಯಲ್ಲಿ ರವಿವಾರ ಡಿಸ್ಟಲರಿ ಸಂಸ್ಕರಣ ಘಟದಲ್ಲಿ ಸ್ಪೋಟಗೊಂಡು ಮೃತಪಟ್ಟ ಕುಟುಂಬಗಳಿಗೆ ತಲಾ 2.5 ಲಕ್ಷ ರೂ. ವ್ಯಯಕ್ತಿಕವಾಗಿ ಪರಿಹಾರ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಗೆ ಸೋಮವಾರ ಬೇಟಿ ನೀಡಿದ ಸಂದರ್ಭದಲ್ಲಿ ದುರಂತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಈ ವಿಷಯ ತಿಳಿಸಿದ ಅವರು ಸ್ಪೋಟದಲ್ಲಿ ಗಾಯಗೊಂಡವರಲ್ಲಿ ಮದುಕರ ಘೋರ್ಪಡೆ (22), ಮನೋಜ ಹೊಸಮಠ, ಸಿದ್ದಪ್ಪ ಪಾಟೀಲ (21), ರಮೇಶ ಜಾದವ (26), ಸತೀಶ ಗಣಿ, ಯಶವಂತ ವಿಠಲ (32) ಎಂಬ 6 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರೆ, ತೀವ್ರ ತೊಂದರೆಗೊಳಗಾದ ಮೋಹನ್ ಸಿಂಗ್ (27), ಲಕ್ಕಪ್ಪ ಯಲನಾಯಕ (25), ಸೈದಪ್ಪ ಹೊಸಮನಿ ಮೂವರನ್ನು ನಗರದ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಹೇಳಿಕೆ ಕೊಡುವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.

ಮಾನವೀಯ ದೃಷ್ಠಿಯಿಂದ ಸಣ್ಣ ಪುಟ್ಟ ಗಾಯಗಳಾದವರಿಗೆ ತಲಾ 25 ಸಾವಿರ ರೂ. ಹಾಗೂ ತೀವ್ರ ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಗಳನ್ನು ವ್ಯಯಕ್ತಿಕವಾಗಿ ನೀಡುವುದಾಗಿ ತಿಳಿಸಿದ ಸಚಿವರು. ಸರಕಾರದಿಂದಲೂ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಅಲ್ಲದೇ ಮುರುಗೇಶ ನಿರಾಣಿಯವರಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದೆಂದರು. ಗಾಯಗೊಂಡವರ ಸ್ಥಿತಿಗತಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕೆರೂಡಿ ಆಸ್ಪತ್ರೆಯಲ್ಲಿರುವ ತೀವ್ರಗಾಯಗೊಂಡ ಮೂವರನ್ನು ವಿಚಾರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಿಮ್ಮಾಪೂರ ಭೇಟಿ ಸಾಂತ್ವನ : 

ಮುಧೋಳ ನಿರಾಣಿ ಸಕ್ಕರೆ ಕಾಖರ್ಾನೆಯಲ್ಲಾದ ಅವಘಡ ಸಂಭವಿಸಿದ ದಿನ  ಉಡುಪಿಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಸೋಮವಾರ ನವನಗರದ ಜಿಲ್ಲಾ ಆಸ್ಪತ್ರೆಗೆ ದಾವಿಸಿ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವದರು. ಜೊತೆಗೆ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಅವರಿಂದ ಮಾಹಿತಿ ಪಡೆದು ಗಾಯಾಳುಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ತಿಳಿಸಿ ನಗರದ ಕೆರೂಡಿ ಆಸ್ಪತ್ರೆಗೆ ತೆರಳಿ ಅಲ್ಲಿ ಗಂಭೀರ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟ್ಟಿಯಾಗಿ ಅವರಿಗೆ ನೀಡಲಾದ ಚಿಕಿತ್ಸೆ ಬಗ್ಗೆ ಆಸ್ಪತ್ರೆಯ ವೈದ್ಯ ಡಾ.ಎಮ್.ನಾರಾಯಣ ಅವರಿಂದ ವಿವರಣೆ ಪಡೆದರು. 

ಈ ದುರಂತ ನಡೆದಿದ್ದು ದುರದುಷ್ಟಕವಾಗಿದ್ದು, ಇಂದಿನ ಕಂಪ್ಯೂಟರ ಯುವ ಹಾಗೂ ಹೊಸ ಹೊಸ ಆವಿಷ್ಕಾರಗಳನ್ನೊಳಗೊಂಡ ಯಂತ್ರಗಳಲ್ಲೂ ಕಂಡು ಬರುತ್ತಿರುವುದು ವಿಪಯರ್ಾಸ. ಇಂತಹ ಅವಘಡಗಳಿಗೆ ಅಮಾಯಕ ಜೀವಿಗಳು ಬಲಿಯಾಗತ್ತಿದ್ದು, ಕಾಖರ್ಾನೆ ಮಾಲಿಕರು ಹಾಗೂ ತಾಂತ್ರಿಕ ವಿಭಾಗದವರು ಹೆಚ್ಚಿನ ಗಮನ ಹರಿಸಿ ಮುಂದೆ ಇಂತಹ ಘಟನೆಯಾಗದಂತೆ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಈ ಘಟನೆ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಸಮರ್ಪಕವಾದ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಈಗಾಗಲೇ ಸಕ್ಕರೆ ಕಾಖರ್ಾನೆ ಮಾಲಿಕರು ಪರಿಹಾರ ಘೋಷಿಸಿದ್ದಾರೆ. ಬೇರೆ ರಾಜ್ಯದ ಗಾಯಾಳುಗಳು ಇಲ್ಲಿ ಗಾಯಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಸಂಪೂರ್ಣ ಗುಣ ಹೊಂದುವವರೆಗೆ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಆರೈಕೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಬದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ನಿದರ್ೇಶಕ ಉದಪುಡಿ ಇದ್ದರು.  

ಕಾಮರ್ಿಕ ಸಚಿವ ಭೇಟಿ ಸಾಂತ್ವನ : 

ಮುಧೋಳ ಸಮೀಪದ ಕುಳಲಿ ಗ್ರಾಮದ ಹತ್ತರವಿರುವ ನಿರಾಣಿ ಸಕ್ಕರೆ ಕಾಖರ್ಾನೆಯಲ್ಲಿ ಸಂಭವಿಸಿದ ದುರ್ಘಟನೆ ಸ್ಥಳಕ್ಕೆ ಕಾಮರ್ಿಕ ಸಚಿವ ವೆಂಕಟರಮಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬಾಗಲಕೋಟೆಗೆ ಆಗಮಿಸಿ ನಗರದ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಹಾಗೂ ಗಾಯಗೊಂಡವ ಕುಟುಂಬಕ್ಕೆ ಸಾಂತ್ವನ ಹೇಳಿದರು.